ಸಾಸ್ವೆಹಳ್ಳಿ: ಗಣೇಶ ಹಬ್ಬದ ಅಂಗವಾಗಿ ಇಲ್ಲಿನ ಕುಂಬಾರ ಬೀದಿಯಲ್ಲಿ ಶನಿವಾರ ವಿವಿಧ ಗ್ರಾಮಗಳ ಜನರು ಗಣೇಶನ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಕರೆದೊಯ್ದರು. ಇದರಿಂದ ಅಲ್ಲಿ ಜಾತ್ರೆ ಏರ್ಪಟ್ಟಿತ್ತು.
ವಿವಿಧ ಗ್ರಾಮಗಳ ಭಕ್ತರು ಗಣೇಶನ ಮೂರ್ತಿ ಒಯ್ಯಲು ಟ್ರ್ಯಾಕ್ಟರ್, ಬೈಕ್, ಕಾರ್‌ಗಳಲ್ಲಿ ಬಂದಿದ್ದರು. ವಿವಿಧ ಕಲಾ ತಂಡಗಳೊಂದಿಗೆ ಗಣೇಶನಿಗೆ ಜೈ ಕಾರ ಹಾಕುತ್ತಾ ಮೆರವಣಿಗೆಯಲ್ಲಿ ಸಾಗಿದರು.
ಕುಳಗಟ್ಟೆ, ಹನುಮನಹಳ್ಳಿ ಸೇರಿದಂತೆ ಕೆಲವು ಗ್ರಾಮದಲ್ಲಿ ಒಂದೇ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಗ್ರಾಮದ 6 ಕುಟುಂಬದಿಂದ 500ಕ್ಕೂ ಹೆಚ್ಚು ಗಣಪನ ವಿಗ್ರಹ ತಯಾರಿಸಿಾಗಿದೆ. ಹನಗವಾಡಿ, ಚಿಕ್ಕಬಾಸೂರ ಹಾಗೂ ಕಲ್ಲಹಳ್ಳಿ ಗ್ರಾಮಗಳಲ್ಲಿ ಗಣೇಶನ ಮೂರ್ತಿ ತಯಾರಿಸಿ ಮಾರಾಟ ಮಾಡಲಾಗಿದೆ ಎಂದು ಕುಂಬಾರ್ ಬಸವರಾಜಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.