ADVERTISEMENT

ದಾವಣಗೆರೆ: ಗಂಗಾಪರಮೇಶ್ವರಿ ಜಯಂತ್ಯುತ್ಸವ, ಪೂರ್ಣಕುಂಭ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 6:53 IST
Last Updated 25 ಜೂನ್ 2022, 6:53 IST
ಗಂಗಾಪರಮೇಶ್ವರಿ ಜಯಂತ್ಯುತ್ಸವದ ಅಂಗವಾಗಿ ದಾವಣಗೆರೆಯಲ್ಲಿ ದುರ್ಗಾಂಬಿಕಾ ದೇವಸ್ಥಾನದ ಮುಂಭಾಗ ಮಹಿಳೆಯರು ಪೂರ್ಣಕುಂಭದ ಹೊತ್ತು ಮೆರವಣಿಗೆಯಲ್ಲಿ ಸಾಗಿದರು –ಪ್ರಜಾವಾಣಿ ಚಿತ್ರ
ಗಂಗಾಪರಮೇಶ್ವರಿ ಜಯಂತ್ಯುತ್ಸವದ ಅಂಗವಾಗಿ ದಾವಣಗೆರೆಯಲ್ಲಿ ದುರ್ಗಾಂಬಿಕಾ ದೇವಸ್ಥಾನದ ಮುಂಭಾಗ ಮಹಿಳೆಯರು ಪೂರ್ಣಕುಂಭದ ಹೊತ್ತು ಮೆರವಣಿಗೆಯಲ್ಲಿ ಸಾಗಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಜಿಲ್ಲಾ ಗಂಗಾಮತಸ್ಥರ ಸಂಘ ಮತ್ತು ಗಂಗಾಪರಮೇಶ್ವರಿ ಜಯಂತ್ಯುತ್ಸವ ಸಮಿತಿಯಿಂದ ಶುಕ್ರವಾರ ಗಂಗಾಪರಮೇಶ್ವರಿ ಜಯಂತ್ಯುತ್ಸವ ಆಚರಿಸಲಾಯಿತು.

ಜಯಂತ್ಯುತ್ಸವದ ಅಂಗವಾಗಿ ಮಹಿಳೆಯರು ಪೂರ್ಣಕುಂಭ ಮೆರವಣಿಗೆ ನಡೆಸಿದರು. ನಗರದೇವತೆ ದುರ್ಗಾಂಬಿಕಾ ದೇವಸ್ಥಾನದಿಂದ ಹೊರಟ ಮೆರವಣಿಗೆ ಹೊಂಡದ ವೃತ್ತದ ಮೂಲಕ ಗಂಗಾಮತ ಸಮಾಜದ ಕಾಂಪ್ಲೆಕ್ಸ್‌ ಬಳಿ ಗಂಗಾಪರಮೇಶ್ವರಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳುಕುಣಿತ ತಂಡಗಳು ಪಾಲ್ಗೊಂಡಿದ್ದವು.

ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಧೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಾಗಾನಹಳ್ಳಿ ಬಿ.ಕೆ. ಮಂಜುನಾಥ್, ಸಮಾಜದ ಮುಖಂಡರಾದ ವಾಗೀಶ್, ನಿಂಗರಾಜು, ಗಣೇಶ್ ಕಂದನಕೋವಿ, ರವಿಕುಮಾರ್, ರಂಗಣ್ಣ, ಗಂಗಾಧರ್, ಕೃಷ್ಣಮೂರ್ತಿ, ಮಣಿ, ರಾಕೀ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.