ಗಜಂಫರ್ ಅಲಿ
ಬಸವಾಪಟ್ಟಣ: ‘ದಾವಣಗೆರೆ ನಿವಾಸಿ, ಉದ್ಯಮಿ ಗಜಂಫರ್ ಅಲಿ ಅವರು ಇಲ್ಲಿನ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗಾಗಿ ಕೊಳವೆಬಾವಿ ಕೊರೆಸಿದ್ದಾರೆ. ವಿದ್ಯಾರ್ಥಿಗಳಿಗಾಗಿ ಟಿ.ವಿ. ಮತ್ತು ಪ್ರಿಂಟರ್ ಕೊಡುಗೆಯಾಗಿಯೂ ನೀಡಿದ್ದಾರೆ’ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆಸಿಫ್ ಅಲಿ ಹೇಳಿದರು.
‘1913ರಲ್ಲಿ ಸ್ಥಾಪನೆಯಾದ ಶಾಲೆಗೆ ಗಜಂಫರ್ ಅಲಿ ಅವರ ತಂದೆ ಪಟೇಲ್ ಖಾದರ್ ಸಾಬ್ ಅವರು ನಿವೇಶನ ದಾನವಾಗಿ ನೀಡಿದ್ದರು. ಈಗ ಅವರ ಪುತ್ರ ಗಜಂಫರ್ ಅಲಿ ಅಂದಾಜು ₹3 ಲಕ್ಷ ವೆಚ್ಚದ ಪರಿಕರಗಳನ್ನು ಶಾಲೆಗೆ ಕೊಡುಗೆ ನೀಡಿದ್ದಾರೆ. ಗ್ರಾಮಕ್ಕೆ ₹10 ಲಕ್ಷ ಮೌಲ್ಯದ ಆಂಬುಲೆನ್ಸ್ ನೀಡಿದ್ದಾರೆ’ ಎಂದು ಮೊಹ್ಮದ್ ಜಿಯಾವುಲ್ಲಾ ತಿಳಿಸಿದರು.
‘ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್ ಅವರು ಕುಡಿಯುವ ನೀರಿನ ಫಿಲ್ಟರ್ ಹಾಗೂ ಸಂತೇಬೆನ್ನೂರಿನ ದಾನಿ ಮಹಬೂಬ್ ಅಲಿ ಅವರು ವಿದ್ಯಾರ್ಥಿಗಳಿಗೆ ಟೈ ಮತ್ತು ಬೆಲ್ಟ್ ನೀಡಿದ್ದಾರೆ’ ಎಂದು ಮುಖ್ಯ ಶಿಕ್ಷಕ ನಾಸಿರ್ ಖಾನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.