ಹರಿಹರ: ನಗರದ ಲದ್ವಾ ಓಣಿ ನಿವಾಸಿ ಡಿ.ಆರ್.ಮೊಹಮ್ಮದ್ ಅಜರುದ್ದೀನ್ ಅವರ ಪತ್ನಿ ರುಕ್ಸರ್ ಖಾನಮ್ ಮಂಡಿಸಿದ ಸಂಶೋಧನಾ ಗ್ರಂಥಕ್ಕೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ (ಜಿಕೆವಿಕೆ) ಪಿಎಚ್.ಡಿ ಪದವಿ ಹಾಗೂ ಸ್ವರ್ಣ ಪದಕ ನೀಡಿದೆ.
ಕೃಷಿ ಮಾರುಕಟ್ಟೆ ಹಾಗೂ ಸಹಕಾರ ವಿಷಯದಲ್ಲಿ ಧಾರವಾಡದ ಕೃಷಿ ವಿ.ವಿಯಿಂದ ಪದವಿ ಪಡೆದ ಇವರು ಬೆಂಗಳೂರು ಕೃಷಿ ವಿ.ವಿಯಲ್ಲಿ ಇದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ನಂತರ ಅದೇ ವಿ.ವಿಯಲ್ಲಿ ಡಾ.ಸಿದ್ದಯ್ಯ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪದವಿ ಪಡೆದರು.
ಮೇ 15ರಂದು ವಿ.ವಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ಪದವಿ ಹಾಗೂ ಸ್ವರ್ಣ ಪದಕ ನೀಡಲಾಯಿತು. ಇವರು ಗದಗಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿ.ವಿಯಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.