ಮಾಯಕೊಂಡ: ಮಂಗಳವಾರ ತಡರಾತ್ರಿ ಸುರಿದ ಮಳೆಗೆ ಮಾಯಕೊಂಡ ಹೋಬಳಿಯ ಹುಚ್ಚವ್ವನಹಳ್ಳಿ ಸಮೀಪದ ಎಚ್. ರಾಂಪುರ ಕೆರೆ ತುಂಬಿ ಕೋಡಿ ಬಿದ್ದು ಇಟ್ಟಿಗೆ ಹಳ್ಳಕ್ಕೆ ನೀರು ಹರಿಯುತ್ತಿದೆ.
ಈ ವರ್ಷ ಉತ್ತಮ ವರ್ಷಧಾರೆ ಆಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕಳೆದೆರಡು ವರ್ಷಕ್ಕೆ ಹೋಲಿಸಿದರೆ ಬೆಳೆಗಳು ಕೊಂಚ ಉತ್ತಮವಾಗಿವೆ. ಈಗಾಗಲೇ ಮಾಯಕೊಂಡ, ಆನಗೋಡು, ಬಾಡಾ ಸೇರಿ ಹೋಬಳಿಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಹಳ್ಳಗಳು ಭಾರಿ ಪ್ರಮಾಣದಲ್ಲಿ ಹರಿಯದಿದ್ದರೂ ಕೆರೆಗಳಿಗೆ ಅಲ್ಪ ಸ್ವಲ್ಪ ನೀರು ಬಂದಿತ್ತು. ಇದರಿಂದ ಈ ಭಾಗದ ರೈತರಲ್ಲಿ ಅಂತರ್ಜಲ ವೃದ್ಧಿಯಾಗುವ ವಿಶ್ವಾಸ ಮೂಡಿದೆ.
ಮಾಯಕೊಂಡ, ನರಗನಹಳ್ಳಿ, ಅಂದನೂರು, ಕೊಡಗನೂರು, ಕೊಗ್ಗನೂರು ಸೇರಿ ತಾಲ್ಲೂಕಿನ ಹಲವು ಕೆರೆಗಳು ಇನ್ನೂ ತುಂಬಬೇಕಿದೆ ಎಂದು ರೈತರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.