ADVERTISEMENT

ಗ್ರಾ.ಪಂ. ಚುನಾವಣೆ: 148 ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 5:39 IST
Last Updated 20 ಮಾರ್ಚ್ 2021, 5:39 IST

ದಾವಣಗೆರೆ: ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಮಾರ್ಚ್ 15ರಿಂದ ಶುಕ್ರವಾರದವರೆಗೆ ಒಟ್ಟು 148 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇವುಗಳಲ್ಲಿ 69 ಮಹಿಳೆಯರು ನಾಮಪತ್ರ ಸಲ್ಲಿಸಿದ್ದಾರೆ.

ಬೇತೂರು, ಕನಕಗೊಂಡನಹಳ್ಳಿ, ಕುಕ್ಕವಾಡ ಹಾಗೂ ಮಾಯಕೊಂಡ ಗ್ರಾಮ ಪಂಚಾಯಿತಿಗಳ ಒಟ್ಟು 60 ಸ್ಥಾನಗಳಿಗೆ ಮಾರ್ಚ್ 29ರಂದು ಚುನಾವಣೆ ನಡೆಯಲಿದ್ದು, ತಾಲ್ಲೂಕು ಕೇಂದ್ರಕ್ಕೆ ಒತ್ತಾಯಿಸಿ ಚುನಾವಣೆ ಬಹಿಷ್ಕರಿಸಿದ ಕಾರಣ ಮಾಯಕೊಂಡ ಗ್ರಾಮ ಪಂಚಾಯಿತಿಯ 15 ಸ್ಥಾನಗಳಿಗೆ ಒಂದೂ ನಾಮ ಪತ್ರವೂ ಸಲ್ಲಿಕೆಯಾಗಿಲ್ಲ.

ಪರಿಶಿಷ್ಟ ಜಾತಿಯ 18, ಪರಿಶಿಷ್ಟ ಪಂಗಡದ 15, ಹಿಂದುಳಿದ ವರ್ಗ ‘ಎ’ಗೆ 25, ಹಿಂದುಳಿದ ವರ್ಗ ‘ಬಿ’ಗೆ 7, ಸಾಮಾನ್ಯ ವರ್ಗದಿಂದ 83 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಕೆಗೆ ಶುಕ್ರವಾರ ಕಡೆಯ ದಿನವಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.