
ನ್ಯಾಮತಿ: ತಾಲ್ಲೂಕಿನ ಗೋವಿನಕೋವಿಯಲ್ಲಿ ಫೆ.17 ಮತ್ತು 18ರಂದು ನಡೆಯಲಿರುವ ಹಾಲಸ್ವಾಮಿ ಜಾತ್ರಾ ಮಹೋತ್ಸವ ಮತ್ತು ಮುಳ್ಳುಗದ್ದಿಗೆ ಉತ್ಸವಕ್ಕೆ ಇಲ್ಲಿನ ಕೃಷಿ ಉತ್ಪನ್ನ ಉಪಮಾರುಕಟ್ಟೆ ತರಕಾರಿ ವರ್ತಕರನ್ನು ಪೀಠಾಧ್ಯಕ್ಷ ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ಆಹ್ವಾನಿಸಿದರು.
‘ಮಠದ ಕಾರ್ಯಕ್ರಮಗಳಿಗೆ ತರಕಾರಿ ವರ್ತಕರು ಉಚಿತವಾಗಿ ತರಕಾರಿಯನ್ನು ನೀಡುವ ಪರಂಪರೆ ಇಟ್ಟುಕೊಂಡಿದ್ದಾರೆ. ಹಾಗೆಯೇ ನಾಡಿನ ವಿವಿಧ ಮಠ-ಮಂದಿರಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೂ ತರಕಾರಿ ನೀಡಿ ಭಕ್ತಿ ಮೆರೆದಿದ್ದಾರೆ. ಮುಂದಿನ ದಿನಗಳಲ್ಲೂ ಇದು ಮುಂದುವರಿಯಬೇಕು. ಹಾಲೇಶನ ಕೃಪೆಯಿಂದ ವ್ಯಾಪಾರ ವಹಿವಾಟು ಅಭಿವೃದ್ದಿಯಾಗಲಿ’ ಎಂದು ಸ್ವಾಮೀಜಿ ಹಾರೈಸಿದರು.
ಪ್ರತಿ ವರ್ತಕರು, ಹಮಾಲಿಗಳು, ವಾಹನ ಚಾಲಕರು, ಭಕ್ತರನ್ನು ಸನ್ಮಾನಿಸಿ ಆಶೀರ್ವದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.