ADVERTISEMENT

ಹನುಮನಹಳ್ಳಿ:ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 7:49 IST
Last Updated 26 ಆಗಸ್ಟ್ 2025, 7:49 IST
ಹನುಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಆಯ್ಕೆಯಾದ ನಿರ್ದೇಶಕರು.
ಹನುಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಆಯ್ಕೆಯಾದ ನಿರ್ದೇಶಕರು.   

ಪ್ರಜಾವಾಣಿ ವಾರ್ತೆ

ಸಾಸ್ವೆಹಳ್ಳಿ: ಸಮೀಪದ ಹನುಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆಗಾಗಿ ಭಾನುವಾರ ನಡೆದ ಚುನಾವಣೆಯಲ್ಲಿ 12 ನಿರ್ದೇಶಕರ ಸ್ಥಾನಗಳಿಗೆ 11 ಜನ ಆಯ್ಕೆಯಾಗಿದ್ದಾರೆ. ಒಟ್ಟು 18 ನಾಮಪತ್ರಗಳು ಸಲ್ಲಿಕೆಯಾಗಿದ್ದವು, ಅದರಲ್ಲಿ ಒಬ್ಬ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 11 ಸ್ಥಾನಗಳಿಗೆ 64 ಮತದಾರರಲ್ಲಿ 63 ಮತದಾರರು ಮತ ಚಲಾಯಿಸಿದ್ದಾರೆ ಎಂದು ಚುನವಣಾಧಿಕಾರಿ ನವೀನ್ ಕುಮಾರ್ ಕೆ.ಜಿ ತಿಳಿಸಿದ್ದಾರೆ.

ಮೂರು ಅಭ್ಯರ್ಥಿಗಳು ಸಾಮಾನ್ಯ ಮಹಿಳಾ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಈ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪದ್ಮಮ್ಮ ಮತ್ತು ಬಸಮ್ಮ ತಲಾ 23 ಮತಗಳನ್ನು ಪಡೆದರೆ, ಸಾಕಮ್ಮ 26 ಮತಗಳನ್ನು ಗಳಿಸಿ ಜಯಗಳಿಸಿದ್ದಾರೆ. ಉಳಿದ ಒಂದು ಸ್ಥಾನಕ್ಕೆ ಪದ್ಮಮ್ಮ ಮತ್ತು ಬಸಮ್ಮ ಸಮಾನ ಮತಗಳನ್ನು ಪಡೆದ ಕಾರಣ, ಚೀಟಿ ಮೂಲಕ ಆಯ್ಕೆ ಮಾಡಲಾಯಿತು.

ADVERTISEMENT

ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ರತ್ನಬಾಯಿ ಮತ್ತು ವಿನೋದ ಬಾಯಿ ಸ್ಪರ್ಧಿಸಿದ್ದು, ವಿನೋದ ಬಾಯಿ ವಿಜೇತರಾಗಿದ್ದಾರೆ.

ಹಿಂದುಳಿದ ವರ್ಗ (ಅ)ಮೀಸಲು ಸ್ಥಾನಕ್ಕೆ ಎಚ್.ಜಿ. ವಿನಯ್ ಮತ್ತು ಎನ್. ಹಾಲೇಶ್ ನಡುವೆ ಪೈಪೋಟಿ ನಡೆದು, ಎಚ್.ಜಿ. ವಿನಯ್ ಜಯಗಳಿಸಿದ್ದಾರೆ.

ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ 6 ಸ್ಥಾನಗಳಿಗೆ 10 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅವರಲ್ಲಿ ನಂಜುಂಡಿ, ಬಸವರಾಜಯ್ಯ, ಕಲ್ಲೇಶಪ್ಪ, ಡಿ. ವಿಮಲಾಕ್ಷ ಮತ್ತು ದಶರಥ ರಾವ್ ವಿಜೇತರಾಗಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಉಮೇಶ್ ಹಾಗೂ ಮತದಾರರು ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.