ಹರಿಹರ: ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ನಗರ ಠಾಣೆ ಪೊಲೀಸರು, 8 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ನಿವಾಸಿಗಳಾದ ಚಂದ್ರು ಎನ್., ಸೈಯದ್ ಹಫೀಜ್, ತೌಸೀಫ್ ಅಹಮದ್ ಬಂಧಿತರು. ನಗರದ ಬಾಜಾರ್ ಮೊಹಲ್ಲಾ ನಿವಾಸಿ ಅಬ್ದುಲ್ ವಾಹಿದ್ ಎಂಬವರು ತಮ್ಮ ಬೈಕ್ ಕಳ್ಳತನವಾಗಿರುವ ಕುರಿತು ಈಚೆಗೆ ನೀಡಿದ್ದ ದೂರು ಆಧರಿಸಿ ಕಾರ್ಯಾಚರಣೆ ನಡೆಸಲಾಗಿತ್ತು.
ಹರಿಹರ ನಗರ ಠಾಣೆ ಪಿಐ ಆರ್.ಎಫ್. ದೇಸಾಯಿ ನೇತೃತ್ವದ ತಂಡವು ಬಂಧಿತರಿಂದ ಅಂದಾಜು ₹2.55 ಲಕ್ಷ ಮೌಲ್ಯದ ಬೈಕ್‌ಗಳನ್ನು ವಶಪಡಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.