ADVERTISEMENT

ಹರಿಹರ: ವೀರಭದ್ರೇಶ್ವರಸ್ವಾಮಿ ಗುಗ್ಗಳ, ಪಲ್ಲಕ್ಕಿ ಉತ್ಸವ ಇಂದು

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 15:57 IST
Last Updated 29 ಆಗಸ್ಟ್ 2024, 15:57 IST
ವೀರಭದ್ರೇಶ್ವರ ಸ್ವಾಮಿ
ವೀರಭದ್ರೇಶ್ವರ ಸ್ವಾಮಿ   

ಹರಿಹರ: ನಗರದ ಎಚ್.ಪಿ.ಚಿನ್ನಪ್ಪ ಕಾಂಪೌಂಡ್‌ನಲ್ಲಿರುವ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಆ.30 ರಂದು ಶ್ರಾವಣ ಮಾಸದ ಗುಗ್ಗಳ, ಪಲ್ಲಕ್ಕಿ ಉತ್ಸವ ಹಾಗೂ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 8ಕ್ಕೆ ವೀರಭದ್ರ ಸ್ವಾಮಿ ದೇವರ ಗುಗ್ಗಳ, ಪಲ್ಲಕ್ಕಿ ಉತ್ಸವವು ದೇವಸ್ಥಾನದ ಆವರಣದಿಂದ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಪುರವಂತರ ಕುಣಿತದೊಂದಿಗೆ ಸಂಚರಿಸಿ ದೇವಸ್ಥಾನಕ್ಕೆ ಆಗಮಿಸುವುದು. ನಂತರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ನಡೆಯಲಿದೆ.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ವೀರಭದ್ರೇಶ್ವರ ಸ್ವಾಮಿ ಸೇವಾ ಸಮಿತಿಯ ಸಂಚಾಲಕ ಜಿ.ಕೆ.ಶಂಕರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.