ಹರಿಹರ: ದಾವಣಗೆರೆ ನಗರದ ವಿನಾಯಕ ಶಾಲೆಯ ಆವರಣದಲ್ಲಿ ಈಚೆಗೆ ನಡೆದ ರಾಜ್ಯ ಮಟ್ಟದ ಸ್ಟ್ರೆಂತ್ ಲಿಫ್ಟಿಂಗ್ ಮಹಿಳಾ ಮತ್ತು ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಹರಿಹರದ ಬ್ರದರ್ಸ್ ಜಿಮ್ ತಂಡ ಸತತವಾಗಿ 5ನೇ ಬಾರಿ ಸಮಗ್ರ ಪ್ರಶಸ್ತಿ ಪಡೆದಿದೆ.
ಬ್ರದರ್ಸ್ ಜಿಮ್‌ನಿಂದ ಭಾಗಹಿವಹಿಸಿದ್ದ 45 ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳು 27 ಚಿನ್ನ, 20 ಬೆಳ್ಳಿ, 10 ಕಂಚು ಸೇರಿ ಒಟ್ಟು 57 ಪದಕಗಳನ್ನು ಪಡೆದರು.
ಪುರುಷರ ವಿಭಾಗದಲ್ಲಿ ಆಸಿಫ್ ಅವರು ಬೆಂಚ್ ಪ್ರೆಸರ್-2024 ಪ್ರಶಸ್ತಿ ಪಡೆದರೆ, ಮಾಸ್ಟರ್ ಬೆಂಚ್ ಪ್ರೆಸರ್-2024 ಪ್ರಶಸ್ತಿಗೆ ಮೊಹಮ್ಮದ್ ರಫೀಕ್ ಭಾಜನರಾದರು. ಮಹಿಳೆಯರ ವಿಭಾಗದಲ್ಲಿ ರಂಜಿತ ಜೂನಿಯರ್ ಬೆಸ್ಟ್ ಬೆಂಚ್ ಪ್ರೆಸರ್-2024 ಪ್ರಶಸ್ತಿ ಪಡೆದರೆ, ಸೀನಿಯರ್ ವಿಭಾಗದಲ್ಲಿ ರೇಖಾ ಸಿಂಗ್ ಬೆಸ್ಟ್ ಸ್ಟ್ರೆಂತ್ ಲಿಫ್ಟರ್-2024 ಪ್ರಶಸ್ತಿಗೆ ಭಾಜನರಾದರು.
ಜನವರಿ 1ರಿಂದ ಹರಿಯಾಣದ ಲೋಹಾರ್ ನಗರದಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ಟ್ರೆಂತ್ ಲಿಫ್ಟಿಂಗ್ ಸ್ಪರ್ಧೆಗೆ ಇವರು ಅಯ್ಕೆಯಾಗಿದ್ದಾರೆ. ಕ್ರೀಡಾಪಟುಗಳು ಈ ಸಾಧನೆಗೆ ಬ್ರದರ್ಸ್ ಜಿಮ್ ಸಂಚಾಲಕ, ಅಂತರರಾಷ್ಟ್ರೀಯ ಬಾಡಿಬಿಲ್ಡರ್ ಅಕ್ರಂಬಾಷ, ತರಬೇತುದಾರರಾದ ಮೊಹಮ್ಮದ್ ರಫೀಕ್, ಶೇರ್ ಅಲಿ, ಶೌಕತ್ ಅಲಿ ಮುಲ್ಲಾ ಹಾಗೀ ಜಿಮ್‌ನ ಕ್ರೀಡಾಪಟುಗಳು ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.