ADVERTISEMENT

ಪಂಜ ಕುಸ್ತಿ: ಬ್ರದರ್ಸ್ ಜಿಮ್‌ಗೆ 13 ಪದಕ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 6:32 IST
Last Updated 3 ಆಗಸ್ಟ್ 2025, 6:32 IST
ಹರಿಹರದ ಬ್ರದರ್ಸ್ ಜಿಮ್‌ನ ಕ್ರೀಡಾಪಟುಗಳು ಸವದತ್ತಿಯಲ್ಲಿ ಈಚೆಗೆ ನಡೆದ ಅಂತರ ಜಿಲ್ಲಾ ಪಂಜ ಕುಸ್ತಿ ಸ್ಪರ್ಧೆಯಲ್ಲಿ ಕಂಚಿನಗಳನ್ನು ಪದಕ ಪಡೆದರು
ಹರಿಹರದ ಬ್ರದರ್ಸ್ ಜಿಮ್‌ನ ಕ್ರೀಡಾಪಟುಗಳು ಸವದತ್ತಿಯಲ್ಲಿ ಈಚೆಗೆ ನಡೆದ ಅಂತರ ಜಿಲ್ಲಾ ಪಂಜ ಕುಸ್ತಿ ಸ್ಪರ್ಧೆಯಲ್ಲಿ ಕಂಚಿನಗಳನ್ನು ಪದಕ ಪಡೆದರು   

ಹರಿಹರ: ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಛತ್ರಪತಿ ಫಂಡೇಷನ್ ಹಾಗೂ ವಿ.ಜೆ.ಇನ್‌ಸ್ಟಿಟ್ಯೂಟ್‌ನಿಂದ ಈಚೆಗೆ ಆಯೋಜಿಸಿದ್ದ ಅಂತರ ಜಿಲ್ಲಾ ಮಟ್ಟದ ಪಂಜ ಕುಸ್ತಿ (ಆರ್ಮ್ ರೆಸ್ಲಿಂಗ್) ಸ್ಪರ್ಧೆಯಲ್ಲಿ ನಗರದ ಬ್ರದರ್ಸ್ ಜಿಮ್‌ನ ಕ್ರೀಡಾಪಟುಗಳು 7 ಚಿನ್ನ, 4 ಬೆಳ್ಳಿ ಹಾಗೂ 2 ಕಂಚಿನ ಪದಕ ಗಳಿಸಿದ್ದಾರೆ.

ಕ್ರೀಡಾಪಟು ಮೊಹಮ್ಮದ್ ಉಮರ್ ಫಾರೂಖ್ ಬೆಸ್ಟ್ ಆರ್ಮ್ ಬೆಂಡರ್-2025 ಹಾಗೂ ಅಬ್ದುಲ್ ಖದೀರ್ ಬೆಸ್ಟ್ ರನ್ನರ್ ಅಪ್-2025 ಪ್ರಶಸ್ತಿ ಪಡೆದಿದ್ದಾರೆ. ಮೊಹಮ್ಮದ್ ಸಲಾಉದ್ದೀನ್, ಸೈಯದ್ ರಜಾ, ಇಮ್ತಿಯಾಜ್ ಅಹ್ಮದ್, ರಂಜಿತಾ, ಚೆಲ್ವಿ ಜಿ. ಚಿನ್ನ, ಅಬ್ಬಾಸ್ ಸುಹೈಲ್, ಖಲಂದರ್, ಸೂರ್ ಸಿಂಗ್, ಇಮ್ರಾನ್ ಖಾನ್ ಬೆಳ್ಳಿ, ಉಮ್ಮೆ ಇರಾಮ್, ಹಫೀಜ್ ಅಹ್ಮದ್ ಉತ್ತಮ ಪ್ರದರ್ಶನ ನೀಡಿ ಕಂಚಿನ ಪದಕ ಗಳಿಸಿದ್ದಾರೆ.

ಶಾಸಕ ಬಿ.ಪಿ.ಹರೀಶ್, ಹರಿಹರ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಅರ್.ಸಿ.ಜಾವೀದ್, ಇಂಡಿಯನ್ ಫೌಂಡ್ರಿ ಮುಖ್ತಿಯಾರ್ ಸಾಬ್, ಬ್ರದರ್ಸ್ ಜಿಮ್ ಸಂಚಾಲಕ ಅಕ್ರಮ್ ಬಾಷಾ, ಅಂತರ ರಾಷ್ಟ್ರೀಯ ದೇಹದಾರ್ಢ್ಯ ಕ್ರೀಡಾಪಟು ಹಾಗೂ ತರಬೇತುದಾರ ಮೊಹಮ್ಮದ್ ರಫೀಕ್ ಅಭಿನಂದಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.