ADVERTISEMENT

ಕಾಂಗ್ರೆಸ್‌ನಲ್ಲೂ ಹಿಂದೂ ಧರ್ಮೀಯರಿದ್ದಾರೆ: ಎಸ್. ರಾಮಪ್ಪ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2021, 4:17 IST
Last Updated 12 ಡಿಸೆಂಬರ್ 2021, 4:17 IST
ಹರಿಹರದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಸದಸ್ಯತ್ವ ಅಭಿಯಾನ, ಜೂಮ್ ಮೀಟಿಂಗ್‌ನಲ್ಲಿ ಶಾಸಕ ಎಸ್. ರಾಮಪ್ಪ ಮಾತನಾಡಿದರು. ಮಾಜಿ ಎಂಎಲ್‌ಸಿ ಜಲಜಾ ನಾಯ್ಕ್ ಇತರರಿದ್ದರು.
ಹರಿಹರದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಸದಸ್ಯತ್ವ ಅಭಿಯಾನ, ಜೂಮ್ ಮೀಟಿಂಗ್‌ನಲ್ಲಿ ಶಾಸಕ ಎಸ್. ರಾಮಪ್ಪ ಮಾತನಾಡಿದರು. ಮಾಜಿ ಎಂಎಲ್‌ಸಿ ಜಲಜಾ ನಾಯ್ಕ್ ಇತರರಿದ್ದರು.   

ಹರಿಹರ: ಬಿಜೆಪಿಯಂತೆ ಕಾಂಗ್ರೆಸ್ ಪಕ್ಷದಲ್ಲೂ ಹಿಂದೂ ಧರ್ಮೀಯರು ದೊಡ್ಡ ಸಂಖ್ಯೆಯಲ್ಲಿದ್ದಾರೆ ಎಂದು ಶಾಸಕ ಎಸ್.ರಾಮಪ್ಪ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಕಾಂಗ್ರೆಸ್ ಸದಸ್ಯತ್ವ ಅಭಿಯಾನ, ಜೂಮ್ ಮೀಟಿಂಗ್‌ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಬಿಜೆಪಿ ಮಾತ್ರ ಹಿಂದೂಗಳ ಐಕಾನ್ ಎಂದು ಬಿಂಬಿಸುವುದು ತಪ್ಪು. ಕಾಂಗ್ರೆಸ್ ಎಲ್ಲಾ ಧರ್ಮೀಯರನ್ನು ಸಮಾನವಾಗಿ ಕಾಣುವ ಪಕ್ಷವಾಗಿದೆ’ ಎಂದರು.

‘2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ. ಈಗಲೇ ಅದರ ಮುನ್ಸೂಚನೆ ಕಾಣುತ್ತಿದೆ. ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಕಾರ್ಯಕರ್ತರು ಹೆಚ್ಚಿನ ವಿಶ್ವಾಸದಿಂದ ತೊಡಗಿಸಿಕೊಂಡು ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಬೇಕು’ ಎಂದರು.

ADVERTISEMENT

ಮಾಜಿ ಎಂಎಲ್‌ಸಿ ಜಲಜಾ ನಾಯ್ಕ್ ಮಾತನಾಡಿ, ‘ದೇಶದಲ್ಲಿ ಬಿಜೆಪಿ ಅಲೆ ಕ್ಷೀಣಿಸುತ್ತಿದೆ. ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಬಸವಳಿದಿದ್ದಾರೆ. ಈ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರು ಕ್ರಿಯಾಶೀಲರಾಗಿ ಪಕ್ಷದ ಪರವಾಗಿ ಶ್ರಮಿಸಬೇಕಿದೆ’ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ. ಹನುಮಂತಪ್ಪ, ಮುಖಂಡರಾದ ನಂದಿಗಾವಿ ಶ್ರೀನಿವಾಸ್ ಎನ್.ಎಚ್., ಸಾಮಾಜಿಕ ಜಾಲತಾಣ ಉಸ್ತುವಾರಿ ಬಾಷಾ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಜೆ. ಮುರುಗೇಶಪ್ಪ, ಎಂ.ಎಸ್.ಆನಂದ್ ಕುಮಾರ್, ಎಚ್.ಶಿವಪ್ಪ, ನಗರಸಭೆ ಉಪಾಧ್ಯಕ್ಷ ಎಂ.ಎಸ್. ಬಾಬುಲಾಲ್, ಸದಸ್ಯರಾದ ಪಕ್ಕೀರಮ್ಮ, ನಾಗರತ್ನಮ್ಮ, ಸೈಯದ್ ಅಬ್ದುಲ್ ಅಲೀಂ, ದಾದಾಪೀರ್ ಭಾನುವಳ್ಳಿ, ಸೈಯದ್ ಆಸಿಫ್ ಜುನೈದಿ, ಅಫ್ರೋಜ್, ಬಿ. ರೇವಣಸಿದ್ದಪ್ಪ, ಸಿ.ಎನ್.ಹುಲಿಗೇಶ್, ವೈ.ಭಾಗ್ಯದೇವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.