ADVERTISEMENT

ಹೊನ್ನಾಳಿ: ಮಹಿಳೆ ಮೇಲೆ ಕರಡಿ ದಾಳಿ 

​ಪ್ರಜಾವಾಣಿ ವಾರ್ತೆ
Published 3 ಜನವರಿ 2025, 14:51 IST
Last Updated 3 ಜನವರಿ 2025, 14:51 IST
ಕರಡಿ ದಾಳಿಯಿಂದ ತೀವ್ರವಾಗಿ ಗಾಯಗೊಂಡು ಹೊನ್ನಾಳಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೈತ ಮಹಿಳೆ ರುದ್ರಿಬಾಯಿ ಅವರ ಆರೋಗ್ಯ ವಿಚಾರಿಸುತ್ತಿರುವ ವಲಯ ಅರಣ್ಯಾಧಿಕಾರಿ ಉಷಾ ಮತ್ತು ಸಿಬ್ಬಂದಿ
ಕರಡಿ ದಾಳಿಯಿಂದ ತೀವ್ರವಾಗಿ ಗಾಯಗೊಂಡು ಹೊನ್ನಾಳಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೈತ ಮಹಿಳೆ ರುದ್ರಿಬಾಯಿ ಅವರ ಆರೋಗ್ಯ ವಿಚಾರಿಸುತ್ತಿರುವ ವಲಯ ಅರಣ್ಯಾಧಿಕಾರಿ ಉಷಾ ಮತ್ತು ಸಿಬ್ಬಂದಿ   

ಹೊನ್ನಾಳಿ: ತಾಲ್ಲೂಕಿನ ಚಿಕ್ಕಬಾಸೂರು ತಾಂಡದ ರುದ್ರಿಬಾಯಿ ಎಂಬ ರೈತ ಮಹಿಳೆಯ ಮೇಲೆ ಕರಡಿಯೊಂದು ದಾಳಿ ಮಾಡಿದ ಘಟನೆ ಈಚೆಗೆ ನಡೆದಿದೆ.  

ರುದ್ರಿಬಾಯಿ ಅವರು ಅವರೆಕಾಯಿ ಬಿಡಿಸಲು ತಮ್ಮ ಜಮೀನಿಗೆ ಹೋಗಿದ್ದಾಗ ಘಟನೆ ಮಾಡಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಚನ್ನಗಿರಿ ತಾಲ್ಲೂಕು ಮಾವಿನಕಟ್ಟೆ ಶಾಂತಿಸಾಗರ ವಲಯದ ಅರಣ್ಯಾಧಿಕಾರಿ ಉಷಾ, ಉಪ ವಲಯದ ಅಧಿಕಾರಿ ಎಲ್. ಮೈಲಾರಸ್ವಾಮಿ, ಗಸ್ತು ಅರಣ್ಯ ಪಾಲಕ ಮಿರ್ಜಾ ಮುಸ್ತಕ್ ಅಹ್ಮದ್ ಹಾಗೂ ಸಿಬ್ಬಂದಿ ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಯ ಆರೋಗ್ಯ ವಿಚಾರಿಸಿದರು. ಇಲಾಖೆಯಿಂದ ಸಂತ್ರಸ್ತ ಮಹಿಳೆಗೆ ಸಿಗಬೇಕಾದ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಉಷಾ ಅವರು ತಿಳಿಸಿದರು.

ADVERTISEMENT
5ಇಪಿ : ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರಡಿ ದಾಳಿಯಿಂದ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ರೈತ ಮಹಿಳೆ ರುದ್ರಿಬಾಯಿಯ ಆರೋಗ್ಯ ವಿಚಾರಿಸುತ್ತಿರುವ ವಲಯ ಅರಣ್ಯಾಧಿಕಾರಿ ಉಷಾ ಮತ್ತು ಸಿಬ್ಬಂದಿ ವರ್ಗ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.