ADVERTISEMENT

ಹೊನ್ನಾಳಿ; ಪುರಸಭೆಗೆ ನಾಲ್ಕು ಸ್ಥಾಯಿ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 4:46 IST
Last Updated 28 ಅಕ್ಟೋಬರ್ 2025, 4:46 IST
ಹೊನ್ನಾಳಿ ಪುರಸಭೆಯ ನಾಲ್ಕು ಸಮಿತಿಗಳಿಗೆ ಆಯ್ಕೆಯಾದ ಅಧ್ಯಕ್ಷರಿಗೆ ಪುರಸಭೆ ವತಿಯಿಂದ ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಲಾಯಿತು
ಹೊನ್ನಾಳಿ ಪುರಸಭೆಯ ನಾಲ್ಕು ಸಮಿತಿಗಳಿಗೆ ಆಯ್ಕೆಯಾದ ಅಧ್ಯಕ್ಷರಿಗೆ ಪುರಸಭೆ ವತಿಯಿಂದ ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಲಾಯಿತು   

ಹೊನ್ನಾಳಿ: ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ಸೂಚನೆಯಂತೆ ಹೊನ್ನಾಳಿ ಪುರಸಭೆಗೆ ನಾಲ್ಕು ಸ್ಥಾಯಿ ಸಮಿತಿಗಳನ್ನು ರಚನೆ ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ಟಿ. ಲೀಲಾವತಿ ತಿಳಿಸಿದರು.

ಸೋಮವಾರ ಪುರಸಭೆ ಸಭಾಂಗಣದಲ್ಲಿ ಸ್ಥಾಯಿ ಸಮಿತಿಗಳ ರಚನೆ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು.

ಒಂದೊಂದು ಸಮಿತಿಗೆ ಅಧ್ಯಕ್ಷರು ಸೇರಿದಂತೆ ಒಟ್ಟು ಐವರು ಸದಸ್ಯರುಗಳು ಇರುತ್ತಾರೆ ಎಂದು ತಿಳಿಸಿದರು.

ADVERTISEMENT

ಸಮಿತಿಗಳು: ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲು ಸಮಿತಿಗೆ ಸದಸ್ಯರಾದ ಸುರೇಶ್ ಹೊಸಕೇರಿ ಅವರು ಅಧ್ಯಕ್ಷರಾಗಿ ಆಯ್ಕೆಯಾದರು. ಸದಸ್ಯರಾಗಿ ಟಿ.ಎಚ್. ರಂಗನಾಥ್, ರಾಜಪ್ಪ ಬಾವಿಮನೆ, ತನ್ವೀರ್ ಅಹಮದ್, ಬಿ.ಕೆ. ಮಾದಪ್ಪ ಆಯ್ಕೆಯಾದರು.

ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿಗೆ ಸವಿತಾ ಹುಡೇದ್ ಹಾಗೂ ಸದಸ್ಯರಾಗಿ ಬಾಬು ಯಾನೆ ರಾಯಪ್ಪ, ಸುಮಾ ಮಂಜುನಾಥ್ ಇಂಚರ, ಕೆ.ವಿ. ಶ್ರೀಧರ, ಮೂಲಿ ರೇವಣಸಿದ್ದಪ್ಪ ಆಯ್ಕೆಯಾದರು.

ಪಟ್ಟಣ ಯೋಜನೆ, ಪುರೋಭಿವೃದ್ಧಿ ಸಮಿತಿಗೆ ಎಸ್.ಎಸ್. ಅನುಶಂಕರ್ ಚಂದ್ರಪ್ಪ, ಸದಸ್ಯರಾಗಿ ಧರ್ಮಪ್ಪ, ರಂಜಿತಾ ಚನ್ನಪ್ಪ, ಸುಮ ಎಚ್.ಬಿ. ಸತೀಶ್ ಹಾಗೂ ರವಿ ಆಯ್ಕೆಯಾದರು.

ಲೆಕ್ಕಪತ್ರ ಸಮಿತಿಗೆ ಎಂ. ಸುರೇಶ್, ಸದಸ್ಯರಾಗಿ ಎನ್. ರಾಜೇಂದ್ರ, ಉಷಾ ಗಿರೀಶ್, ಪದ್ಮಾ ಪ್ರಶಾಂತ್, ಚಂದ್ರಪ್ಪ  ಆಯ್ಕೆಯಾದರು.

ಇದೇ ಸಂದರ್ಭದಲ್ಲಿ ನಾಲ್ಕು ಸಮಿತಿಗಳ ಅಧರ್ಯಕ್ಷರ ಪದಗ್ರಹಣ ನಡೆಯಿತು.

ಪುರಸಭೆಯ ಹಿರಿಯ ಸದಸ್ಯ ಧರ್ಮಪ್ಪ, ಅಧ್ಯಕ್ಷರಾದ ಎ.ಕೆ. ಮೈಲಪ್ಪ, ಸದಸ್ಯರಾದ ಬಾಬು, ಕೆ.ವಿ. ಶ್ರೀಧರ್ ಮಾತನಾಡಿದರು.

ಪುರಸಭೆಯ ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.