
ಹೊನ್ನಾಳಿ: ಶಾಸಕ ಡಿ.ಜಿ.ಶಾಂತನಗೌಡ ಅವರು ಶಾಸಕರ ಅನುದಾನದಡಿ ಇಲ್ಲಿನ ಪೊಲೀಸ್ ಠಾಣೆಗೆ ಶುಕ್ರವಾರ ನೂತನ ವಾಹನವನ್ನು ಹಸ್ತಾಂತರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಶಾಸಕರಿಂದ ವಾಹನದ ಕೀ ಸ್ವೀಕರಿಸಿದರು.
ನಂತರ ಮಾತನಾಡಿದ ಉಮಾ ಪ್ರಶಾಂತ್, ‘ಸ್ಥಳೀಯ ಶಾಸಕರ ಸಹಕಾರದಿಂದ ಹೊನ್ನಾಳಿಯಲ್ಲಿ ಶಾಂತಿಯ ವಾತಾವರಣವಿದೆ’ ಎಂದು ಹೇಳಿದರು.
ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿದೆ ಎಂದರು.
ಹೊನ್ನಾಳಿ ಪೊಲೀಸ್ ಠಾಣೆಗೆ ಕಾರು ಕೊಟ್ಟಿದ್ದು, ಶೀಘ್ರದಲ್ಲಿಯೇ ನ್ಯಾಮತಿ ಹಾಗೂ ಹೊನ್ನಾಳಿ ಪೊಲೀಸ್ ಠಾಣೆಗಳಿಗೆ ತಲಾ ಎರಡು ಬೈಕ್‌ಗಳನ್ನು ನೀಡುವುದಾಗಿ ತಿಳಿಸಿದರು.
ಹೊನ್ನಾಳಿಯಲ್ಲಿ ಸಂಚಾರಿ ನಿಯಮ ಪಾಲನೆಗೆ ಕ್ರಮ ಕೈಗೊಳ್ಳಬೇಕು ಎಂದ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ರಮೇಶ್ ಅವರ ಮಾತಿಗೆ ರಸ್ತೆ ವಿಸ್ತರಣೆ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಮುಗಿದ ತಕ್ಷಣ ಸಂಚಾರಿ ನಿಯಮ ಹಾಗೂ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಕೆಗೆ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಿಪಿಐ ಸುನೀಲ್‍ಕುಮಾರ್, ಪಿಎಸ್‍ಐ ಕುಮಾರ್, ಪಿಎಸ್‍ಐ ನಿರ್ಮಲಾ, ಎಎಸ್‍ಐ ಹರೀಶ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಗೂ ಮುಖಂಡರಾದ ತಕ್ಕನಹಳ್ಳಿ ಸುರೇಶ್, ಡಿ.ಜಿ. ಸುರೇಂದ್ರ, ನರಸಿಂಹಮೂರ್ತಿ, ಶಿವಾನಂದ್, ಇಂಚರ ಮಂಜುನಾಥ್, ಪುರಸಭೆ ಮಾಜಿ ಅಧ್ಯಕ್ಷರಾದ ಮೈಲಪ್ಪ, ಸದಸ್ಯರಾದ ಭಾವಿಮನೆ ರಾಜಣ್ಣ, ಹೊಸಕೇರಿ ಸುರೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.