ADVERTISEMENT

ಇಮಾಮ್ ನಗರ, ಬೇತೂರು ರಸ್ತೆ ಕಂಟೈನ್‌ಮೆಂಟ್ ಝೋನ್

ಇನ್ಸಿಡೆಂಟ್ ಕಮಾಂಡರ್ ಆಗಿ ವಿಜಯ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 4 ಮೇ 2020, 17:07 IST
Last Updated 4 ಮೇ 2020, 17:07 IST
ಮಮತಾ ಹೊಸಗೌಡರ್
ಮಮತಾ ಹೊಸಗೌಡರ್   

ದಾವಣಗೆರೆ: ನಗರದಲ್ಲಿ ಪಾಸಿಟಿವ್ ಪ್ರಕರಣಗಳು ಕಂಡು ಬಂದಿರುವ ಇಮಾಮ್ ನಗರ ಹಾಗೂ ಬೇತೂರು ರಸ್ತೆಯ ಪ್ರದೇಶಗಳನ್ನು ಕಂಟೈನ್‍ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.

ಈ ಎರಡು ಪ್ರದೇಶಗಳಲ್ಲಿ ಪ್ರತಿ ದಿನ ಜ್ವರ, ಐಎಲ್‍ಐ, ಸಾರಿ ಸಮೀಕ್ಷೆ ನಡೆಸಲಾಗುತ್ತಿದೆ. 3 ದಿನಗಳಿಗೊಮ್ಮೆ ಬಫರ್ ಝೋನ್‍ನಲ್ಲಿ ಸಮೀಕ್ಷೆ ನೆಡಸಲಾಗುತ್ತಿದೆ. ಈಗಾಗಲೇ ಪಾಸಿಟಿವ್ ಪ್ರಕರಣಗಳು ಕಂಡು ಬಂದಿರುವ ಬಾಷಾ ನಗರ, ಜಾಲಿ ನಗರಗಳನ್ನು ಕಂಟೈನ್‍ಮೆಂಟ್ ಝೋನ್ ಎಂದು ಆದೇಶಿಸಲಾಗಿದೆ.

ಆರೋಗ್ಯ ಇಲಾಖೆಯ ನಿರ್ದೇಶನದಂತೆ ದುರ್ಬಲ ಆರೋಗ್ಯವಿರುವವರ ಸಮೀಕ್ಷೆಯನ್ನು ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯವರಿಂದ ನಡೆಸಿ ಫ್ಲೂ ಲಕ್ಷಣಗಳು ಕಂಡು ಬಂದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.

ADVERTISEMENT

ಬಾಷಾನಗರ ಎಪಿಸೆಂಟರ್ ಕಂಟೈನ್‍ಮೆಂಟ್ ಝೋನ್‍ನಲ್ಲಿ ಸೋಮವಾರ 2,249 ಮನೆಗಳಿಂದ 9,039 ಜನರನ್ನು ಸಂದರ್ಶಿಸಿ ಫ್ಲೂ ಸಮೀಕ್ಷೆಯನ್ನು ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರನ್ನೊಳಗೊಂಡ 28 ತಂಡಗಳಿಂದ ನಡೆಸಿದ್ದು, ಈ ದಿನ ಯಾವುದೇ ವ್ಯಕ್ತಿಗಳಲ್ಲಿ ಲಕ್ಷಣಗಳು ಕಾಣಿಸಿಕೊಂಡಿಲ್ಲ.

31,234‌ ಜನಸಂಖ್ಯೆ ಇರುವ ಈ ಪ್ರದೇಶದಲ್ಲಿ 4 ಜನರಲ್ಲಿ ಜ್ವರ ಇದ್ದು, ಅವರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ.

ಖಚಿತಪಟ್ಟ ಪ್ರಕರಣಗಳು ಬಂದಿರುವ ಜಾಲಿನಗರ ಎಪಿಸೆಂಟರ್‍ನ ಕಂಟೈನ್‍ಮೆಂಟ್ ಝೋನ್‍ನಲ್ಲಿ ಈ ದಿನ 23,158 ಮನೆಗಳಿಂದ 10,397 ಜನರನ್ನು ಸಂದರ್ಶಿಸಿ ಫ್ಲೂ ಸಮೀಕ್ಷೆಯನ್ನು ನಡೆಸಿದ್ದು, ಈ ದಿನ ಲಕ್ಷಣಗಳು ಇರುವ ಯಾವುದೇ ವ್ಯಕ್ತಿಗಳು ಇರುವುದಿಲ್ಲ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ಇನ್ಸಿಡೆಂಟ್ ಕಮಾಂಡರ್ ಆಗಿ ವಿಜಯ್‌ಕುಮಾರ್

ಇಮಾಮ್‌ನಗರ ಇನ್ಸಿಡೆಂಟ್‌ ಕಮಾಂಡರ್‌ಆಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ ಅವರನ್ನು ನೇಮಕ ಮಾಡಲಾಗಿದೆ.

‘ಇಮಾಮ್‌ನಗರ, ಬೇತೂರು ರೋಡ್, ಮಂಡಕ್ಕಿಭಟ್ಟಿ, ಕೊರಚರಹಟ್ಟಿ ರಸ್ತೆಗಳು ನಮ್ಮ ವ್ಯಾಪ್ತಿಗೆ ಬರಲಿದ್ದು, ಆ ಪ್ರದೇಶಗಳ ಮ್ಯಾಪಿಂಗ್, ಸರ್ವೇ ಕಾರ್ಯ ಆರಂಭಿಸಿದ್ದೇವೆ. ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಕುರಿತು ನಿರ್ಧಾರವಾಗಿಲ್ಲ’ ಎಂದು ಕೆ.ಎಚ್.ವಿಜಯಕುಮಾರ್ ತಿಳಿಸಿದರು.

‘ಆ ಪ್ರದೇಶಗಳಲ್ಲಿ ಸೋಂಕು ನಿವಾರಣ ಔಷಧವನ್ನು ಸಿಂಪಡಣೆ ಮಾಡಲಾಗುವುದು. ಅಲ್ಲಿ ಅಗತ್ಯವಿರುವವರಿಗೆ ಕಿಟ್‌ಗಳನ್ನು ಮನೆಮನೆಗೆ ಕಿಟ್‌ ತಲುಪಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.