ADVERTISEMENT

ದಾವಣಗೆರೆ: ಹಕ್ಕಿಪಿಕ್ಕಿಗಳಿಗೆ ರಾಯಭಾರ ಕಚೇರಿ ನೆರವು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 16:15 IST
Last Updated 4 ಫೆಬ್ರುವರಿ 2026, 16:15 IST
   

ದಾವಣಗೆರೆ: ಮಧ್ಯ ಆಫ್ರಿಕಾದ ಚಾಡ್ ದೇಶದಲ್ಲಿ ವೀಸಾ ಅವಧಿ ಮುಗಿದು ಜೈಲು ಶಿಕ್ಷೆಯ ಭೀತಿ ಎದುರಿಸುತ್ತಿದ್ದ ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಹಕ್ಕಿ-ಪಿಕ್ಕಿ ಸಮುದಾಯದ ಎಂಟು ಜನರ ನೆರವಿಗೆ ಚಾಡ್ ರಾಜಧಾನಿ ಎನ್‌ಜಾಮೆನಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಧಾವಿಸಿದೆ.

ಅವರ ವೀಸಾ ಅವಧಿ ಡಿಸೆಂಬರ್ 22ಕ್ಕೆ ಮುಕ್ತಾಯಗೊಂಡಿತ್ತು. ಎನ್‌ಜಾಮೆನಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದವರನ್ನು ಸಂಪರ್ಕಿಸಿದೆ. ಸಹಾಯ ಹಸ್ತ ಚಾಚುವುದಾಗಿ ಆಶ್ವಾಸನೆ ನೀಡಿದೆ. ಅಧಿಕಾರಿಗಳು ವಶಪಡಿಸಿಕೊಂಡಿರುವ ಪಾಸ್‌ಪೋರ್ಟ್‌ಗಳನ್ನು ಮರಳಿ ಕೊಡಿಸುವುದಾಗಿ ರಾಯಭಾರ ಕಚೇರಿ ಭರವಸೆ ನೀಡಿದೆ ಎಂದು ಹಕ್ಕಿ–ಪಿಕ್ಕಿ ಸಮುದಾಯದ ಸ್ಥಳೀಯ ಮುಖಂಡರು ಮಾಹಿತಿ ನೀಡಿದ್ದಾರೆ.

‘ದಂಡ ರಹಿತವಾಗಿ ವೀಸಾ ನವೀಕರಿಸಿಕೊಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜೈಲು ಶಿಕ್ಷೆಯ ಭೀತಿಯಲ್ಲಿದ್ದ 8 ಜನರು ಅಬೆಚೆ ನಗರದಿಂದ ಬಸ್ ಮೂಲಕ ಎನ್‌ಜಾಮೆನಾಕ್ಕೆ ತೆರಳಿದ್ದಾರೆ’ ಎಂದು ಕರ್ನಾಟಕ ಹಕ್ಕಿ-ಪಿಕ್ಕಿ ಬುಡಕಟ್ಟು ಸಂಘಟನೆಯ ಅಧ್ಯಕ್ಷ ಆರ್. ಪುನೀತ್ ಕುಮಾರ್ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.