ADVERTISEMENT

ಕಮ್ಮಾರಗಟ್ಟೆ: ‘ಜಾನಪದ ಜಾತ್ರೆ’ಯ ಸಡಗರ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 6:50 IST
Last Updated 31 ಜನವರಿ 2026, 6:50 IST
ಸಾಸ್ವೆಹಳ್ಳಿ ಸಮೀಪದ ಕಮ್ಮಾರಗಟ್ಟೆಯಲ್ಲಿ ಜಾನಪದ ಜಾತ್ರೆಯಲ್ಲಿ ಅತಿಥಿಗಳನ್ನು ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಲಾಯಿತು
ಸಾಸ್ವೆಹಳ್ಳಿ ಸಮೀಪದ ಕಮ್ಮಾರಗಟ್ಟೆಯಲ್ಲಿ ಜಾನಪದ ಜಾತ್ರೆಯಲ್ಲಿ ಅತಿಥಿಗಳನ್ನು ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಲಾಯಿತು   

ಸಾಸ್ವೆಹಳ್ಳಿ: ಸಮೀಪದ ಕಮ್ಮಾರಗಟ್ಟೆಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶುಕ್ರವಾರ ‘ಜಾನಪದ ಜಾತ್ರೆ’ಯ ಸಂಭ್ರಮ ನಡೆಯಿತು. ವಿದ್ಯಾರ್ಥಿಗಳ ಪೋಷಕರಿಗಾಗಿ ಆಯೋಜಿಸಿದ್ದ ಗ್ರಾಮೀಣ ಕ್ರೀಡಾಕೂಟವು ಜನಾಕರ್ಷಣೀಯವಾಗಿತ್ತು. 

ಹಳ್ಳಿ ಸೊಗಡಿನ ಪರಿಕರಗಳು, ಎತ್ತಿನ ಗಾಲಿ, ಮಣ್ಣಿನ ಮಡಕೆ ಹಾಗೂ ತಳಿರು- ತೋರಣಗಳಿಂದ ಶಾಲೆಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. 

ಬೆಳಿಗ್ಗೆ ಗ್ರಾಮದ ರಾಮಾಂಜನೇಯ ಮಂದಿರದಲ್ಲಿ ಗೋ-ಪೂಜೆ ನೆರವೇರಿಸಿದ ಮಹಿಳೆಯರು, ಪೂರ್ಣಕುಂಭ ಮೇಳದೊಂದಿಗೆ ಅತಿಥಿಗಳನ್ನು ಎತ್ತಿನ ಗಾಡಿಯ ಮೆರವಣಿಗೆಯಲ್ಲಿ ಶಾಲೆಗೆ ಬರಮಾಡಿಕೊಂಡರು. ಶಾಲೆಯ ಆವರಣದಲ್ಲಿ ಪೋಷಕರಿಗೆ ಗ್ರಾಮೀಣ ಆಟಗಳನ್ನು ಆಯೋಜಿಸಲಾಗಿತ್ತು. 

ADVERTISEMENT

ಶಾಲೆಯ ಮುಖ್ಯೋಪಾಧ್ಯಾಯ ಬಿ.ಸೋಮಶೇಖರ್ ಮಾತನಾಡಿ, ಗ್ರಾಮೀಣ ಕ್ರೀಡೆಗಳ ಮಹತ್ವ ಸಾರುವ ಉದ್ದೇಶದಿಂದ ಕ್ರೀಡಾಕೂಟ ಆಯೋಜಿಸಲಾಗಿತ್ತು. 

ಬಿಇಒ ಕೆ.ಟಿ.ನಿಂಗಪ್ಪ, ಬಿಆರ್‌ಸಿ ಎಂ.ತಿಪ್ಪೇಶಪ್ಪ, ಟಿಪಿಇಒ ಜಗದೀಶ್, ಇಸಿಒಗಳಾದ ಮುದ್ದನ ಗೌಡ, ಹನುಮಂತ ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ಬಿ.ಹನುಮೇಶ್ ಮತ್ತು ಸದಸ್ಯರು, ಗ್ರಾಮದ ಮುಖಂಡರಾದ ಸಿದ್ದಪ್ಪ, ಹನುಮಂತಪ್ಪ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.