ADVERTISEMENT

ಹೊನ್ನಾಳಿ: ಕನಕದಾಸ ಜಯಂತ್ಯುತ್ಸವ ಇಂದು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 6:28 IST
Last Updated 17 ಡಿಸೆಂಬರ್ 2025, 6:28 IST
1ಇಪಿ : 2ಇಪಿ : ಹೊನ್ನಾಳಿಯಲ್ಲಿ ನಡೆಯುವ ಕನಕದಾಸರ ಜಯಂತಿ ಸಮಾರಂಭದ ಬೃಹತ್ ವೇದಿಕೆಯನ್ನು ಎಚ್.ಬಿ. ಮಂಜಪ್ಪ ಮತ್ತು ಸಮಾಜದ ಮುಖಂಡರು ಪರಿಶೀಲಿಸಿ ಮಾತನಾಡಿದರು. 
1ಇಪಿ : 2ಇಪಿ : ಹೊನ್ನಾಳಿಯಲ್ಲಿ ನಡೆಯುವ ಕನಕದಾಸರ ಜಯಂತಿ ಸಮಾರಂಭದ ಬೃಹತ್ ವೇದಿಕೆಯನ್ನು ಎಚ್.ಬಿ. ಮಂಜಪ್ಪ ಮತ್ತು ಸಮಾಜದ ಮುಖಂಡರು ಪರಿಶೀಲಿಸಿ ಮಾತನಾಡಿದರು.    

ಹೊನ್ನಾಳಿ: ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಡಿ. 17ರಂದು ಮಧ್ಯಾಹ್ನ 2 ಗಂಟೆಗೆ ಪ್ರದೇಶ ಕುರುಬರ ಸಂಘದ ವತಿಯಿಂದ ಕನಕದಾಸರ 538ನೇ ಜಯಂತ್ಯುತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಬಯಲುಸೀಮೆ ಪ್ರದೇಶಾಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಬಿ. ಮಂಜಪ್ಪ ತಿಳಿಸಿದರು.

ಮಂಗಳವಾರ ಕಾರ್ಯಕ್ರಮ ನಡೆಯುವ ಖಾಸಗಿ ಬಸ್ ನಿಲ್ದಾಣದಲ್ಲಿ ಹಾಕಲಾಗಿದ್ದ ಬೃಹತ್ ಗಾತ್ರದ ವೇದಿಕೆಯನ್ನು ಪರಿಶೀಲಿಸಿ ಅವರು ಮಾತನಾಡಿದರು.

ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ಮಧ್ಯಾಹ್ನ 12 ಗಂಟೆಗೆ ಬೈಕ್ ರ‍್ಯಾಲಿ ಮೂಲಕ ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದ ಪುರಿ ಸ್ವಾಮೀಜಿ, ಹೊಸದುರ್ಗ ಶಾಖಾ ಮಠದ ಈಶ್ವರಾನಂದ ಪುರಿ ಸ್ವಾಮೀಜಿ ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಹಾಗೂ ಡಾ. ನಾಗಲಕ್ಷ್ಮೀ ಚೌದರಿ ಅವರನ್ನು ದೇವನಾಯಕನಹಳ್ಳಿಯಲ್ಲಿರುವ ಕನಕದಾಸರ ಪ್ರತಿಮೆ ಬಳಿಗೆ ಕರೆತರಲಾಗುವುದು. ನಂತರ ಅಲ್ಲಿಂದ ಸಾರೋಟಿನಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಗುವುದು ಎಂದು ತಿಳಿಸಿದರು.

ADVERTISEMENT

ಮೆರವಣಿಗೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾತಂಡಗಳು ಹಾಗೂ ಅವಳಿ ತಾಲ್ಲೂಕಿನ ಡೊಳ್ಳು ಕುಣಿತದವರು ಭಾಗವಹಿಸಲಿದ್ದಾರೆ.  ಕಾರ್ಯಕ್ರಮದಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

ವೇದಿಕೆಯಲ್ಲಿ ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಶಾಸಕರಾದ ಆರ್. ಪ್ರಸನ್ನಕುಮಾರ್, ಎಸ್. ರಾಮಪ್ಪ, ನಂದಿಗಾವಿ ಶ್ರೀನಿವಾಸ್, ಶಿವಮೊಗ್ಗದ ಕಾಂಗ್ರೆಸ್ ಮುಖಂಡ ಶ್ರೀಕಾಂತ್, ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್ ಪಾಲ್ಗೊಳ್ಳಲಿದ್ದಾರೆ. ಸಂಜೆ 6 ಗಂಟೆಗೆ ಬೆಂಗಳೂರಿನ ಈವೆಂಟ್ಸ್ ಕಲಾ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಕುರುಬ ಸಂಘದ ಅಧ್ಯಕ್ಷ ಎಂ.ಸಿ. ಮೋಹನ್, ಕಾರ್ಯಾಧ್ಯಕ್ಷ ಧರ್ಮಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಆರ್. ಮಹೇಶ್, ಉಪಾಧ್ಯಕ್ಷರಾದ ಹರಳಹಳ್ಳಿ ಬೆನಕಪ್ಪ, ಮಾಜಿ ಸೈನಿಕ ಎಂ. ವಾಸಪ್ಪ, ಎಚ್.ಎ. ನರಸಿಂಹಪ್ಪ, ಪುಟ್ಟಪ್ಪ, ಮಾದಪ್ಪ, ರಾಘವೇಂದ್ರ, ಎಚ್.ಬಿ. ಅಣ್ಣಪ್ಪ, ರಾಜು ಸರಳಿನಮನೆ, ಹಾಲುಮತ ಸಮಾಜದ ಮಹಿಳಾ ಅಧ್ಯಕ್ಷೆ ಪಂಕಜಾ ಅರುಣ್ ಸೇರಿ ಹಲವರು ಹಾಜರಿದ್ದರು.

ಹೊನ್ನಾಳಿಯಲ್ಲಿ ನಡೆಯುವ ಕನಕದಾಸರ ಜಯಂತಿ ಸಮಾರಂಭದ ಬೃಹತ್ ವೇದಿಕೆಯನ್ನು ಎಚ್.ಬಿ. ಮಂಜಪ್ಪ ಮತ್ತು ಸಮಾಜದ ಮುಖಂಡರು ಪರಿಶೀಲಿಸಿ ಮಾತನಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.