ADVERTISEMENT

‘ಕನ್ನಡ ಭಾಷೆ ಪ್ರತಿಯೊಬ್ಬರೂ ಗೌರವಿಸಿ’

ಕಸಾಪ ವತಿಯಿಂದ ನಡೆದ ಸಾಹಿತ್ಯ ಸೌರಭ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 5:18 IST
Last Updated 20 ಸೆಪ್ಟೆಂಬರ್ 2025, 5:18 IST
ನ್ಯಾಮತಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶನಿವಾರ ನಡೆದ ಮಾಸಿಕ ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕನ್ನಡ ಸಾಹಿತ್ಯಾಸಕ್ತರು 
ನ್ಯಾಮತಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶನಿವಾರ ನಡೆದ ಮಾಸಿಕ ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕನ್ನಡ ಸಾಹಿತ್ಯಾಸಕ್ತರು    

ನ್ಯಾಮತಿ: ‘ಕರ್ನಾಟಕ ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡ ಭಾಷೆಗೆ ಗೌರವ ಕೊಡುವುದರ ಜೊತೆಗೆ ಭಾಷೆಯನ್ನು ಕಲಿಯಬೇಕು’ ಎಂದು ಉರ್ದು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶಕೀಲ್ ಅಹ್ಮದ್ ತಿಳಿಸಿದರು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಪ್ರತಿತಿಂಗಳ ಎರಡನೇ ಶನಿವಾರ ನಡೆಯುವ ಮಾಸಿಕ ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

‘ಕನ್ನಡ ಭಾಷೆಯ ಬಗ್ಗೆ ಆಸಕ್ತಿ, ಪ್ರೀತಿ ಇದ್ದುದರಿಂದ ಭಾಷೆಯನ್ನು ಕಲಿತು ಕನ್ನಡ ಶಿಕ್ಷಕನಾಗಿ ಸೇವೆ ಸಲ್ಲಿಸಿಸಿದೆ. ಈಗಲೂ ಹೊನ್ನಾಳಿ ಮತ್ತು ನ್ಯಾಮತಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ’ ಎಂದರು.

ADVERTISEMENT

‘ಪ್ರಪಂಚದ ಇತರೆ ಭಾಷೆಗಳ ಜೊತೆಗೆ ಕನ್ನಡ ಭಾಷೆಗೆ ತನ್ನದೇ ಆದ ಸ್ಥಾನವಿದೆ. ಕನ್ನಡವನ್ನು ಮೊದಲು ಕನ್ನಡಿಗರು ಪ್ರೀತಿಸುವಂತೆ ಹೇಳುವ ಪರಿಸ್ಥಿತಿ ಬಂದಿರುವುದು ವಿಷಾಧನೀಯ’ ಎಂದು ರಾಜ್ಯ ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಪಿ.ಎಂ.ಷಣ್ಮುಖಯ್ಯ ಹೇಳಿದರು. 

ಸಮಾಜ ಸೇವಕಿ ಎಸ್.ಸೌಭಾಗ್ಯಮ್ಮ, ಸದಸ್ಯ ಸೈಯದ್ ಅಪ್ಸರ್ ಪಾಷ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ನ್ಯಾಮತಿ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಅಧ್ಯಕ್ಷತೆ ವಹಿಸಿದ್ದರು.

ಬೆಳಗುತ್ತಿ ಹೋಬಳಿ ಘಟಕದ ಅಧ್ಯಕ್ಷ ಎಂ.ಜಿ.ಕವಿರಾಜ, ಕೋಶಾಧ್ಯಕ್ಷ ಎಂ.ಎಸ್.ಜಗದೀಶ, ಸಂಘಟನಾ ಕಾರ್ಯದರ್ಶಿ ಸಿ.ಕೆ.ಬೋಜರಾಜ, ಅಂಬಿಕಾ ಬಿದರಕಟ್ಟೆ, ಬಿ.ಆರ್.ಉಷಾ, ಸಂಚಾಲಕ ಚಂದನ್‌ ಜಂಗ್ಲೀ, ಸೊಂಡೂರು ಮಹೇಶ್ವರಪ್ಪ, ಎನ್.ಎಸ್.ಅರುಣಕುಮಾರ, ಗ್ರಂಥಪಾಲಕಿ ಈ ಸುಮಲತಾ, ರೇಖಾ ಗಜಾನನ, ಬಿದರಕಟ್ಟೆ ಸತೀಶ, ಎಂ.ಜಯದೇವಪ್ಪ, ಯೋಗಿತಾ, ಕನ್ನಡ ಉಪನ್ಯಾಸಕಿ ವಿಜಯಮಣಿ, ಬಸವದಳ ಸುಮಾ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.