ADVERTISEMENT

ನ್ಯಾಮತಿ: ಚುಸಾಪ ತಾಲ್ಲೂಕು ಘಟಕ ರಚನೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 4:48 IST
Last Updated 24 ನವೆಂಬರ್ 2025, 4:48 IST
ಕವಿರಾಜ
ಕವಿರಾಜ   

ನ್ಯಾಮತಿ: ಚಟುಕು ಸಾಹಿತ್ಯ ಪರಿಷತ್ತಿನ ನ್ಯಾಮತಿ ತಾಲ್ಲೂಕಿನ ನೂತನ ಘಟಕ ಅಸ್ತಿತ್ವಕ್ಕೆ ಬಂದಿತು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಕಚೇರಿಯಲ್ಲಿ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. 

ನೂತನ ಅಧ್ಯಕ್ಷರಾಗಿ ಮಲ್ಲಿಗೇನಹಳ್ಳಿ ಗ್ರಾಮದ ಉಪನ್ಯಾಸಕ ಎಂ.ಜಿ. ಕವಿರಾಜ ಅವಿರೋಧವಾಗಿ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ನಾಗರಾಜಪ್ಪ ಅರ್ಕಾಚಾರ್, ಉಪಾಧ್ಯಕ್ಷರಾಗಿ ಜಿ.ನಿಜಲಿಂಗಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ರಾಜಾರಾಂ ದೇಸಾಯಿ, ಸಹಕಾರ್ಯದರ್ಶಿಯಾಗಿ ಈ. ಸುಮಲತಾ, ಕೋಶಾಧ್ಯಕ್ಷರಾಗಿ ಸೊಂಡೂರು ಮಹೇಶ್ವರಪ್ಪ, ಸಂಘಟನಾ ಕಾರ್ಯದರ್ಶಿಗಳಾಗಿ ಭಾಗ್ಯಲಕ್ಷ್ಮಿ ಮತ್ತು ಎನ್.ಬಿ.ರವೀಂದ್ರಚಾರ್, ನಿರ್ದೇಶಕರಾಗಿ ಉಪನ್ಯಾಸಕ ಟಿ.ಆರ್.ಕುಬೇರಪ್ಪ, ಸುಭಾಷ್‌ ಚಂದ್ರರೆಡ್ಡಿ, ಎ.ಹಂಪಣ್ಣ, ಬಿ.ಜಿ.ಚೈತ್ರಾ, ಲತಾಪ್ರಕಾಶ, ಎಂ.ಎಸ್.ಜಗದೀಶ, ಸಿ.ಆರ್.ಶ್ವೇತಾ, ಜಿ.ಷಡಾಕ್ಷರಿ, ಎಸ್.ಫಾಲಾಕ್ಷಪ್ಪ ಅವರನ್ನು ಆಯ್ಕೆ ಮಾಡಲಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.