
ಹೊನ್ನಾಳಿ: ‘ಹೊಸಪೇಟೆ, ಹರಿಹರ, ಮಲೇಬೆನ್ನೂರು, ಹೊನ್ನಾಳಿ, ಹೊಳಲೂರು, ಶಿವಮೊಗ್ಗ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಣೆ ಮಾಡಿಸಲಾಗುವುದು’ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಶನಿವಾರ ಹಿರೇಕಲ್ಮಠದಲ್ಲಿ ನಡೆದ ಎರಡನೇ ದಿನದ ರಾಜ್ಯಮಟ್ಟದ ಕೃಷಿಮೇಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಈ ರಸ್ತೆಯನ್ನು ಮೇಲ್ದರ್ಜೆಗೇರಿಸಬೇಕು ಎನ್ನುವ ಕೂಗು ಬಹಳ ವರ್ಷಗಳಿಂದ ಕೇಳಿ ಬರುತ್ತಿದೆ. ಈ ಬಗ್ಗೆ ನಾನು, ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹಾಗೂ ತಂದೆ ಬಿ.ಎಸ್.ಯಡಿಯೂರಪ್ಪ ಅವರು ಪ್ರಯತ್ನ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಗಮನಸೆಳೆದಿದ್ದೇವೆ. ಶೀಘ್ರವೇ ಇದನ್ನು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಣೆ ಮಾಡಿಸಲಿದ್ದೇವೆ’ ಎಂದರು.
ರೈತರಿಗಾಗಿ ಕೃಷಿ ಬಜೆಟ್ ಮಂಡಿಸಿದ ಏಕೈಕ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ರೈತನಾಯಕ ಬಿ.ಎಸ್. ಯಡಿಯೂರಪ್ಪ ಅವರು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಶನಿವಾರ ಹಿರೇಕಲ್ಮಠದಲ್ಲಿ ನಡೆದ ಎರಡನೇ ದಿನದ ರಾಜ್ಯಮಟ್ಟದ ಕೃಷಿಮೇಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿದ್ದು, ಕೃಷಿ ಬಜೆಟ್ ಮಂಡಿಸಿದ್ದು, ಹಾಲಿಗೆ ಪ್ರೋತ್ಸಾಹ ಧನ ಕೊಟ್ಟಿದ್ದು, ಈ ಎಲ್ಲವೂ ರೈತÀಪರ ಕಾರ್ಯಕ್ರಮಗಳು, ರೈತರಿಗಾಗಿ ಹಗಲಿರುಳು ಹೋರಾಟ ಮಾಡಿದ ಬಿ.ಎಸ್. ಯಡಿಯೂರಪ್ಪ ಅವರು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ ಎಂದರು. ರೈತ ನೆಮ್ಮದಿಯಿಂದ ಬದುಕಬೇಕು, ರೈತನಿಗಾಗಿ ಇನ್ನಷ್ಟು ಆವಿಷ್ಕಾರಗಳು ಆಗಬೇಕು ರೈತನಿದ್ದರೆ ನಾವೆಲ್ಲ ಎಂದು ರಾಘವೇಂದ್ರ ಹೇಳಿದರು.
ಶ್ರೀಮಠಕ್ಕೂ ನಮ್ಮ ಕುಟುಂಬಕ್ಕೂ ಸಂಬಂಧ : ಶ್ರೀಮಠಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ, ನಮ್ಮ ಅಮ್ಮನ ಅಪ್ಪ ಅಂದರೆ ನಮ್ಮ ತಾತ ಅವರು ಹೊನ್ನಾಳಿಯಲ್ಲಿ ರೈಸ್‍ಮಿಲ್ ನಡೆಸುತ್ತಿದ್ದರು. ಅದನ್ನು ಶ್ರೀಮಠಕ್ಕೆ ಬರೆದುಕೊಟ್ಟಿದ್ದನ್ನು ನಾವು ಕೇಳಿದ್ದೇವೆ. ಇಂದು ಅದೇ ಜಾಗದಲ್ಲಿ ಶ್ರೀಮಠದಿಂದ ವಿದ್ಯಾರ್ಥಿಗಳ ವಸತಿಗೃಹ ನಡೆಸಲಾಗುತ್ತಿದೆ. ಈ ಸಂಬಂಧ ಮುಂದುವರೆದುಕೊಂಡು ಬಂದಿದೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೃಷಿಮೇಳವನ್ನು ಉದ್ಘಾಟಿಸಿದರು. ಯಡಿಯೂರಪ್ಪ ಅವರಿಗೆ ಸ್ವಾಮೀಜಿಗಳು ಹಾಗೂ ಶಾಸಕ ಡಿ.ಜಿ. ಶಾಂತನಗೌಡ ಅವರು ನೇಗಿಲ ಮಾದರಿಯನ್ನು ನೀಡಿ ಶಾಲು ಹೊದೆಸಿ ಸನ್ಮಾನಿಸಿದರು.
ಡಾ. ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು, ಮಂಗಳೂರಿನ ಸಿದ್ದಲಿಂಗಸ್ವಾಮಿಗಳು, ಶಾಸಕ ಡಿ.ಜಿ. ಶಾಂತನಗೌಡ, ಅನ್ನದಾನಯ್ಯ ಶಾಸ್ತ್ರೀಗಳು, ಹರಿಹರದ ಚಂದ್ರಶೇಖರ್ ಪೂಜಾರ್, ಬೆನಕನಹಳ್ಳಿ ವೀರಣ್ಣ, ಕಡದಕಟ್ಟೆ ದಾನಪ್ಪ, ಕುಮಾರಸ್ವಾಮಿ ಉಪಸ್ಥಿತರಿದ್ದರು.
ಕೃಷಿ ಬಜೆಟ್ ಮಂಡಿಸಿದ ಏಕೈಕ ಮುಖ್ಯಮಂತ್ರಿ ಬಿಎಸ್‌ವೈ
ಹೊನ್ನಾಳಿ: ‘ಹೊಸಪೇಟೆ ಹರಿಹರ ಮಲೇಬೆನ್ನೂರು ಹೊನ್ನಾಳಿ ಹೊಳಲೂರು ಶಿವಮೊಗ್ಗ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಣೆ ಮಾಡಿಸಲಾಗುವುದು’ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಶನಿವಾರ ಹಿರೇಕಲ್ಮಠದಲ್ಲಿ ನಡೆದ ಎರಡನೇ ದಿನದ ರಾಜ್ಯಮಟ್ಟದ ಕೃಷಿಮೇಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಈ ರಸ್ತೆಯನ್ನು ಮೇಲ್ದರ್ಜೆಗೇರಿಸಬೇಕು ಎನ್ನುವ ಕೂಗು ಬಹಳ ವರ್ಷಗಳಿಂದ ಕೇಳಿ ಬರುತ್ತಿದೆ. ಈ ಬಗ್ಗೆ ನಾನು ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹಾಗೂ ತಂದೆ ಬಿ.ಎಸ್.ಯಡಿಯೂರಪ್ಪ ಅವರು ಪ್ರಯತ್ನ ನಡೆಸಿದ್ದು ಪ್ರಧಾನಿ ನರೇಂದ್ರ ಮೋದಿಯವರ ಗಮನಸೆಳೆದಿದ್ದೇವೆ. ಶೀಘ್ರವೇ ಇದನ್ನು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಣೆ ಮಾಡಿಸಲಿದ್ದೇವೆ’ ಎಂದರು. ‘ರೈತರಿಗಾಗಿ ಕೃಷಿ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ರೈತನಾಯಕ ಬಿ.ಎಸ್. ಯಡಿಯೂರಪ್ಪ’ ಎಂದು ಅವರು ಹೇಳಿದರು. ಅವಿನಾಭಾವ ಸಂಬಂಧ: ‘ಶ್ರೀಮಠಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ನಮ್ಮ ತಾತ ಅವರು ಹೊನ್ನಾಳಿಯಲ್ಲಿ ರೈಸ್‍ಮಿಲ್ ನಡೆಸುತ್ತಿದ್ದರು. ಅದನ್ನು ಶ್ರೀಮಠಕ್ಕೆ ಬರೆದುಕೊಟ್ಟಿದ್ದನ್ನು ನಾವು ಕೇಳಿದ್ದೇವೆ. ಇಂದು ಅದೇ ಜಾಗದಲ್ಲಿ ಶ್ರೀಮಠದಿಂದ ವಿದ್ಯಾರ್ಥಿಗಳ ವಸತಿಗೃಹ ನಡೆಸಲಾಗುತ್ತಿದೆ. ಈ ಸಂಬಂಧ ಮುಂದುವರಿದುಕೊಂಡು ಬಂದಿದೆ’ ಎಂದು ರಾಘವೇಂದ ಹೇಳಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೃಷಿಮೇಳವನ್ನು ಉದ್ಘಾಟಿಸಿದರು. ಯಡಿಯೂರಪ್ಪ ಅವರಿಗೆ ಸ್ವಾಮೀಜಿ ಹಾಗೂ ಶಾಸಕ ಡಿ.ಜಿ. ಶಾಂತನಗೌಡ ಅವರು ನೇಗಿಲ ಮಾದರಿಯನ್ನು ನೀಡಿ ಸನ್ಮಾನಿಸಿದರು. ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಂಗಳೂರಿನ ಸಿದ್ದಲಿಂಗಸ್ವಾಮೀಜಿ ಶಾಸಕ ಅನ್ನದಾನಯ್ಯ ಶಾಸ್ತ್ರೀಗಳು ಹರಿಹರದ ಚಂದ್ರಶೇಖರ್ ಪೂಜಾರ್ ಬೆನಕನಹಳ್ಳಿ ವೀರಣ್ಣ ಕಡದಕಟ್ಟೆ ದಾನಪ್ಪ ಕುಮಾರಸ್ವಾಮಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.