ADVERTISEMENT

ಬರಗೂರು ಸಮಿತಿಯಲ್ಲಿ ತುಕುಡೆ ಗ್ಯಾಂಗ್: ಬಿ.ಸಿ.ನಾಗೇಶ್

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 8:34 IST
Last Updated 14 ಜೂನ್ 2022, 8:34 IST
 ಶಿಕ್ಷಣ ಸಚಿವ ಬಿ.ಸಿ.ನಾಗೇಶ್
ಶಿಕ್ಷಣ ಸಚಿವ ಬಿ.ಸಿ.ನಾಗೇಶ್   

ದಾವಣಗೆರೆ: ಜೆಎನ್‌ಯುನಲ್ಲಿ ಇರುವುದು ತುಕುಡೆ ಗ್ಯಾಂಗ್. ಪಾಕಿಸ್ತಾನದ ಧ್ವಜ ಹಾರಿಸುವ ಗ್ಯಾಂಗ್. ಇದೇ ಗ್ಯಾಂಗ್ ಬರಗೂರು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ಹಿಂದೆ ಇರುವುದು. ಜೆಎನ್‌ಯು ಪ್ರೊಫೆಸರ್ ಪತ್ರ ಬರೆದಿರುವುದು ಇದಕ್ಕೆ ಸಾಕ್ಷಿ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆರೋಪಿಸಿದರು.

ಅವರು ದಾವಣಗೆರೆ ತಾಲ್ಲೂಕಿನ ಹಳೇ ಬಿಸಲೇರಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದರು.

ಹಿಂದೂ ಸಮಾಜವನ್ನು ಒಡೆಯಲು, ದೇಶ ಇಬ್ಭಾಗ ಮಾಡಲು ತುಕುಡೆ ಗ್ಯಾಂಗ್ ಹಿಂದಿನಿಂದಲೂ ಕೆಲಸ ಮಾಡುತ್ತಿತ್ತು. ಅದನ್ನು ನಾವು ಹೇಳುವಾಗ ನಂಬಿರಲಿಲ್ಲ. ಈಗ ಅದು ನಿಜವಾಗಿದೆ ಎಂದರು.

ADVERTISEMENT

ತುಕುಡೆ ಗ್ಯಾಂಗ್ ಏನೇ ಮಾಡಿದರೂ ಯಶಸ್ವಿಯಾಗಲ್ಲ ಎಂದರು.

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ದೇಶ ಭಾರತ. ಬ್ರಿಟಿಷರು ಬರುವ ಮುಂಚೆಯೆ ದೇಶದಲ್ಲಿ ಜ್ಞಾನಾರ್ಜನೆ ನಡೆಯುತಿತ್ತು. ಈ ಇತಿಹಾಸವನ್ನ ತಿಳಿಸುವ ಕೆಲಸವನ್ನು ನಾವು ಮಾಡಿದ್ದೇವೆ ಎಂದರು.

ಪಠ್ಯದಲ್ಲಿ ಬಸವಣ್ಣನಿಗೆ ಯಾವುದೇ ಅವಮಾನ ಮಾಡಿಲ್ಲ. ಬರಗೂರು ಸಮಿತಿಯ ಪಠ್ಯದಲ್ಲಿ ಏನಿದೆಯೋ ಅದೇ ಈಗಲೂ ಇದೆ. ಜನಿವಾರ ಕಿತ್ತು ಹಾಕಿ ಹೋದರು ಎಂದು ಅಲ್ಲಿತ್ತು. ಉಪನಯನ ಆಗಿ ಹೋದರು ಎಂಬುದು ಇಲ್ಲಿದೆ. ಅದರಲ್ಲಿ ಅವಮಾನ ಅಗುವಂಥದ್ದೇನಿದೆ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.