ADVERTISEMENT

ಪಾಲಿಕೆ ಚುನಾವಣೆ ಬಹಿಷ್ಕರಿಸಲು ಕರೂರು ಗ್ರಾಮಸ್ಥರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 7:25 IST
Last Updated 2 ನವೆಂಬರ್ 2019, 7:25 IST
   

ದಾವಣಗೆರೆ: ಯಾವುದೇ ಮೂಲ ಸೌಕರ್ಯ ಕಲ್ಪಿಸದ ಕಾರಣ ಈ ಬಾರಿ ಮಹಾನಗರ ಪಾಲಿಕೆ ಚುನಾವಣೆಯನ್ನು ಬಹಿಷ್ಕರಿಸಲು 45ನೇ ವಾರ್ಡ್ ವ್ಯಾಪ್ತಿಯ ಕರೂರು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಕರೂರು ಎಲ್ಲಿದೆ ಎಂದು ಪ್ರಶ್ನಿಸಿರುವ ಜಿಲ್ಲಾಧಿಕಾರಿ ಕರೂರಿಗೆ ಭೇಟಿ ಕೊಡಬೇಕು ಎಂದು ಕರೂರಿನಲ್ಲಿ ರಸ್ತೆಯಲ್ಲಿ ಕೂತು ಪ್ರತಿಭಟನೆ ನಡೆಸುತ್ತಿದ್ದಾರೆ.

ಸ್ಮಶಾನ ಜಾಗದಲ್ಲಿ ಭವನ ಕಟ್ಟಿದ್ದಾರೆ. ಸ್ಮಶಾನ ಇಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಇಲ್ಲ. ಪಾಲಿಕೆ 15 ದಿನಕ್ಕೆ ಒಮ್ಮೆ ಮಾತ್ರ ನೀರು ಕೊಡುತ್ತಿದೆ. ಶಾಲೆ ಬೀಳುವ ಸ್ಥಿತಿಯಲ್ಲಿದೆ. ರಸ್ತೆಗಳು ಸರಿಯಿಲ್ಲ. ಬಸ್ ವ್ಯವಸ್ಥೆ ಇಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಮನವಿ ಸ್ವೀಕರಿಸಲು ಪಾಲಿಕೆಯ ಕಾರ್ಯಪಾಲಕ ಎಂಜಿನಿಯರ್ ಭಾರತಿ ಅವರು ಬಂದರೂ ಮನವಿ ನೀಡದ ಪ್ರತಿಭಟನಕಾರರು, 'ಜಿಲ್ಲಾಧಿಕಾರಿಯೇ ಬರಬೇಕು. ವರ್ಷ ಕಳೆದರೂ ಇಲ್ಲೇ ಕೂರುತ್ತೇವೆ' ಎಂದು ಪಟ್ಟು ಹಿಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.