
ಕಡರನಾಯ್ಕನಹಳ್ಳಿ: ‘ಸಮಸಮಾಜ ಸಂದೇಶ ಸಾರಿದ ದಾಸ ಶ್ರೇಷ್ಠ ಕನಕದಾಸರು’ ಎಂದು ಶಾಸಕ ಬಿಪಿ ಹರೀಶ್ ಹೇಳಿದರು.
ಸಮೀಪದ ಎಕ್ಕೆಗೊಂದಿ ಕ್ರಾಸ್ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗಳು ಕಡ್ಡಾಯ ನಿಲುಗಡೆಗೆ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು.
‘ನಿತ್ಯ ಶಾಲಾ ಕಾಲೇಜು ವಿದ್ಯಾರ್ಥಿಗಳು ಬಸ್ ನಿಲ್ಲಿಸುತ್ತಿಲ್ಲ ಎಂದು ದೂರುತ್ತಿದ್ದರು. ಸಾರ್ವಜನಿಕರು ಮಲೇಬೆನ್ನೂರು, ಶಿವಮೊಗ್ಗ ತಲುಪಲು ಹರಿಹರಕ್ಕೆ ಹೋಗಿ ನಂತರ ವಾಪಸ್ ಬರಬೇಕಿತ್ತು. ಈ ಸಮಸ್ಯೆ ನಮ್ಮ ಗಮನಕ್ಕೆ ಬಂದಾಗ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಗಮನಕ್ಕೆ ತಂದಾಗ ಸ್ಪಂದಿಸಿದ್ದಾರೆ’ ಎಂದರು.
‘ಸಾರಿಗೆ ಬಸ್‌ಗಳು ಸಾರ್ವಜನಿಕರ ಆಸ್ತಿ. ಅವುಗಳ ರಕ್ಷಣೆ ಜನರ ಜವಾಬ್ದಾರಿಯಾಗಿದೆ’ ಎಂದು ಡಿಪೋ ಮ್ಯಾನೇಜರ್ ಮಹೇಶ್ವರಪ್ಪ ತಿಳಿಸಿದರು.
‘ಎಕ್ಕೆಗೊಂದಿ ಕ್ರಾಸ್ ಪ್ರಮುಖ ಜಂಕ್ಷನ್ ಆಗಿದೆ. ಇಲ್ಲಿಂದ ಯಾತ್ರಾ ಸ್ಥಳಗಳಾದ ಉಕ್ಕಡಗಾತ್ರಿ ಅಜ್ಜಯ್ಯ, ನಂದಿಗುಡಿ ಬಸವಣ್ಣ, ಭಾನುವಳ್ಳಿಯ ಲಕ್ಷ್ಮಿನಾರಾಯಣ ದೇವಸ್ಥಾನಗಳಿಗೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಯಾತ್ರಿಕರು ಬರುತ್ತಾರೆ. ಅಲ್ಲದೇ ಕಾರವಾರ, ಶಿವಮೊಗ್ಗ, ವಿಜಯನಗರ, ದಾವಣಗೆರೆ ಸಂಪರ್ಕಿಸುವ ಪ್ರಮುಖ ಕೇಂದ್ರ ಬಿಂದುವಾಗಿದೆ. ಸಾರ್ವಜನಿಕರ ಬೇಡಿಕೆಗೆ ಶಾಸಕರು, ಜಿಲ್ಲಾಧಿಕಾರಿ, ಹರಿಹರ ಮತ್ತು ದಾವಣಗೆರೆ ವಿಭಾಗದ ನಿರ್ವಾಹಕರು ಸ್ಪಂದಿಸಿದ್ದಾರೆ’ ಎಂದು ಕರ್ನಾಟಕ ರಾಜ್ಯ ನವ ನಿರ್ಮಾಣ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಬಿ. ರುದ್ರಗೌಡ ಎಂದರು.
ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸದಸ್ಯರು ಕಂಕಣ ಕಟ್ಟುವ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು.
ಬಸಣ್ಣ ಬಣಕಾರ, ಅರ್ಚಕ ಮಹಾದೇವಪ್ಪ, ಮೋಹನ್, ಧರ್ಮರಾಜ್, ಎಂ.ಮಂಜಪ್ಪ, ಸಿರಿಗೆರೆ ಪ್ರಶಾಂತ, ಮಲ್ಲೇಶಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಮಹಾಂತೇಶ್, ಎಂ.ಮಂಜಪ್ಪ, ಜಡಿಯಪ್ಪ, ದಳವಾಯಿ ಕಣ್ಣಪ್ಪರ್ ಬೀರಪ್ಪ, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಪ್ರಮುಖರಾದ ಸುವರ್ಣ, ಸುಮಾ, ಧರ್ಮಮ್ಮ, ಸಿದ್ದಮ್ಮ, ಸುನೀತಾ, ನೇತ್ರಾ, ಚೈತ್ರಾ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.