ADVERTISEMENT

ಕೆಎಸ್‌ಆರ್‌ಟಿಸಿ: 10 ನೌಕರರ ಅಮಾನತು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 5:35 IST
Last Updated 21 ಏಪ್ರಿಲ್ 2021, 5:35 IST

ದಾವಣಗೆರೆ: ಮುಷ್ಕರದಲ್ಲಿ ಪಾಲ್ಗೊಂಡಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಎಫ್ಐಆರ್ ದಾಖಲಾಗಿದ್ದ ಕೆಎಸ್‌ಆರ್‌ಟಿಸಿ ದಾವಣಗೆರೆ ವಿಭಾಗದ 10 ನೌಕರರನ್ನು ಅಮಾನತು ಮಾಡಲಾಗಿದೆ.

ಹರಿಹರ ಡಿಪೊದ 6 ಹಾಗೂ ದಾವಣಗೆರೆ ಡಿಪೊದ 4 ಮಂದಿಯನ್ನು ಅಮಾನತು ಮಾಡಿದ್ದು, ಮನವಿಯ ಮೇರೆಗೆ ದಾವಣಗೆರೆಗೆ ವರ್ಗಾವಣೆಗೊಂಡಿದ್ದ 66 ನೌಕರರನ್ನು ಪುತ್ತೂರು, ಶಿವಮೊಗ್ಗ ಹಾಗೂ ಮಂಗಳೂರು ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಕೆಎ‌ಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಎನ್. ಹೆಬ್ಬಾಳ್
ತಿಳಿಸಿದರು.

ದಾವಣಗೆರೆಯ 66 ಮಂದಿ ಎರಡು ವರ್ಷಗಳ ಹಿಂದೆ ದಾವಣಗೆರೆಗೆ ವರ್ಗಾವಣೆಯಾಗಿದ್ದರು. ಆದರೆ ಅವರು ಕರ್ತವ್ಯಕ್ಕೆ ಹಾಜರಾಗದ ಕಾರಣ ಈ ಹಿಂದಿನ ಜಾಗಗಳಿಗೆ ಅವರನ್ನು ವರ್ಗಾವಣೆ ಮಾಡಲಾಗಿದೆ.

ADVERTISEMENT

ಮುಷ್ಕರದ ನಡುವೆಯೂ ಮಂಗಳವಾರ 95 ಬಸ್‌ಗಳು ಸಂಚರಿಸಿದ್ದು, 150ಕ್ಕೂ ಹೆಚ್ಚು ಮಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಬೆಂಗಳೂರು, ಶಿವಮೊಗ್ಗ, ಹೊಸಪೇಟೆ, ಬಳ್ಳಾರಿ ಹಾಗೂ ಹರಪನಹಳ್ಳಿ ಕಡೆಗಳಿಗೆ ಹೆಚ್ಚಿನ ಬಸ್‌ಗಳು ಸಂಚರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.