ADVERTISEMENT

ಹರಲೀಪುರ: ಕೆರೆ ಅಭಿವೃದ್ಧಿ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 12:34 IST
Last Updated 16 ಜೂನ್ 2021, 12:34 IST
ಬಸವಾಪಟ್ಟಣ ಸಮೀಪದ ಹರಲೀಪುರದಲ್ಲಿ ನಿರ್ಮಾಣವಾಗುತ್ತಿರುವ ಕೆರೆಯ ಕಾಮಗಾರಿಯನ್ನು ಮಂಗಳವಾರ ತಾಲ್ಲೂಕು ಪಂಚಾಯಿತಿ ಇಒ ಎಂ.ಆರ್. ಪ್ರಕಾಶ್, ಎನ್ಆರ್ಐಜಿ ಸಹಾಯಕ ನಿರ್ದೇಶಕ ಈಶ್ವರ್ ವೀಕ್ಷಿಸಿದರು
ಬಸವಾಪಟ್ಟಣ ಸಮೀಪದ ಹರಲೀಪುರದಲ್ಲಿ ನಿರ್ಮಾಣವಾಗುತ್ತಿರುವ ಕೆರೆಯ ಕಾಮಗಾರಿಯನ್ನು ಮಂಗಳವಾರ ತಾಲ್ಲೂಕು ಪಂಚಾಯಿತಿ ಇಒ ಎಂ.ಆರ್. ಪ್ರಕಾಶ್, ಎನ್ಆರ್ಐಜಿ ಸಹಾಯಕ ನಿರ್ದೇಶಕ ಈಶ್ವರ್ ವೀಕ್ಷಿಸಿದರು   

ಬಸವಾಪಟ್ಟಣ: ಸಮೀಪದ ಹರಲೀಪುರದ ಕೆರೆಯನ್ನು ಉದ್ಯೋಗ ಖಾತ್ರಿಯೋಜನೆಯಲ್ಲಿ ₹ 40 ಲಕ್ಷ ವೆಚ್ಚದಲ್ಲಿ ಪುನರ್‌ ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಾಲ್ಲೂಕು ಪಂಚಾಯಿತಿ ಇಒ ಎಂ.ಆರ್‌. ಪ್ರಕಾಶ್‌ ತಿಳಿಸಿದರು.

ಮಂಗಳವಾರ ಕೆರೆಯ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದರು.

ಸಮಗ್ರ ಕೆರೆ ಅಭಿವೃದ್ಧಿ ಯೋಜನೆಯಲ್ಲಿ ₹ 20 ಲಕ್ಷ ವೆಚ್ಚದಲ್ಲಿ ಕೆರೆ ಏರಿಯ ರಿವಿಟ್‌ಮೆಂಟ್‌ ಕಾಮಗಾರಿ ಅರ್ಧದಷ್ಟು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲು ಮತ್ತೆ ₹ 20 ಲಕ್ಷವನ್ನು ಬಿಡುಗಡೆ ಮಾಡಲಾಗಿದೆ. ಈ ಕೆರೆಯ ಪುನಶ್ಚೇತನದಿಂದ ಹರಲೀಪುರ ಸೇರಿ ಇತರ ಗ್ರಾಮಗಳ ಜನತೆಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.

ADVERTISEMENT

ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ಈಶ್ವರ್‌, ‘ಕಾಮಗಾರಿ ಪೂರ್ಣಗೊಂಡ ನಂತರ ನೀರು ಭರ್ತಿಯಾಗಿ, ನೀರಾವರಿ, ಅಂತರ್ಜಲದ ಹೆಚ್ಚಳ, ಜನ ಜಾನುವಾರುಗಳಿಗೆ , ಯಾತ್ರಿಕರಿಗೆ ಮತ್ತು ಕಾಡು ಪ್ರಾಣಿಗಳಿಗೆ ಕುಡಿಯುವ ನೀರು ದೊರೆಯಲಿದೆ. ಉಳಿದ ಕಾಮಗಾರಿ ಶೀಘ್ರ ಆರಂಭವಾಗಲಿದೆ’ ಎಂದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಮೂರ್ತಿ, ಧರ್ಮೇಗೌಡ, ಹೇಮಾಕ್ಷಿ ರವಿಕುಮಾರ್‌, ಪಿಡಿಒ ಆನಂದನಾಯ್ಕ್‌, ನರೇಗಾ ಸಹಾಯಕ ಎಂಜಿನಿಯರ್‌ ರವಿ ಪಾಟೀಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.