ADVERTISEMENT

ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಬೀಗ

ವೈದ್ಯರ ಹೆಸರಲ್ಲಿ ಲ್ಯಾಬ್ ನಡೆಸುತ್ತಿದ್ದ ಟೆಕ್ನಿಷಿಯನ್

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 20:29 IST
Last Updated 23 ಆಗಸ್ಟ್ 2019, 20:29 IST
ಲ್ಯಾಬ್ ಟೆಕ್ನಿಷಿಯನ್ ನಡೆಸುತ್ತಿದ್ದ ಇಲ್ಲಿನ ವಿದ್ಯಾನಗರದ ಅನಾಹಿತ ಹೆಲ್ತ್‌ಕೇರ್ ಅಂಡ್ ಲ್ಯಾಬೊರೇಟರಿಯನ್ನು ಪಾಲಿಕೆ ಅಧಿಕಾರಿಗಳು ಶುಕ್ರವಾರ ಮುಚ್ಚಿಸಿದರು
ಲ್ಯಾಬ್ ಟೆಕ್ನಿಷಿಯನ್ ನಡೆಸುತ್ತಿದ್ದ ಇಲ್ಲಿನ ವಿದ್ಯಾನಗರದ ಅನಾಹಿತ ಹೆಲ್ತ್‌ಕೇರ್ ಅಂಡ್ ಲ್ಯಾಬೊರೇಟರಿಯನ್ನು ಪಾಲಿಕೆ ಅಧಿಕಾರಿಗಳು ಶುಕ್ರವಾರ ಮುಚ್ಚಿಸಿದರು   

ದಾವಣಗೆರೆ: ವೈದ್ಯರು ಹೆಸರನ್ನು ಬಳಸಿಕೊಂಡು ಲ್ಯಾಬ್ ಟೆಕ್ನಿಷಿಯನ್ ನಡೆಸುತ್ತಿದ್ದ ಇಲ್ಲಿನ ವಿದ್ಯಾನಗರದ ಅನಾಹಿತ ಹೆಲ್ತ್‌ಕೇರ್ ಅಂಡ್ ಲ್ಯಾಬೊರೇಟರಿಯನ್ನು ಪಾಲಿಕೆ ಅಧಿಕಾರಿಗಳು ಶುಕ್ರವಾರ ಮುಚ್ಚಿಸಿದರು.

‘ಈ ಲ್ಯಾಬ್‌ಗೆ ಟ್ರೇಡ್ ಲೈಸೆನ್ಸ್ ಇರಲಿಲ್ಲ. ಅಲ್ಲದೇ ವೈದ್ಯಕೀಯ ನಿಯಮದ ಪ್ರಕಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗ ಳಿಂದ ಅನುಮತಿ ಪಡೆದಿರಲಿಲ್ಲ. ಬಯೊಮೆಡಿಕಲ್ ವೇಸ್ಟ್ ಮ್ಯಾನೇಜ್‌ಮೆಂಟ್‌ ಪ್ರಕಾರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮಾಲಿನ್ಯ ಮಂಡಳಿಯಿಂದ ಅನುಮತಿ ಪತ್ರ (ಕ್ಲಿಯರೆನ್ಸ್ ಸರ್ಟಿಫಿಕೇಟ್)ಪತ್ರವನ್ನೂ ಪಡೆದಿರಲಿಲ್ಲ. ಆದ್ದರಿಂದ ಬಾಗಿಲು ಮುಚ್ಚಿಸಿದೆವು ’ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಮಹಾನಗರ ಪಾಲಿಕೆಯ ಆರೋಗ್ಯ ಸಹಾಯಕ ನಿರ್ದೇಶಕ ಡಾ.ಚಂದ್ರಶೇಖರ್ ಸುಂಕದ್‌ ಮಾಹಿತಿ ನೀಡಿದರು.

‘2014ರಂದು ಲ್ಯಾಬ್ ಆರಂಭವಾಗಿದ್ದು, ಕೆಲ ವರ್ಷಗಳ ಹಿಂದೆ ವೈದ್ಯರು ಬಿಟ್ಟು ಹೋಗಿದ್ದರು. ಅಲ್ಲೇ ಕೆಲಸ ಮಾಡುತ್ತಿದ್ದ ಆಶಿಕ್ ಎಂಬಾತ ವೈದ್ಯರ ಹೆಸರಿನಲ್ಲೇ ಲ್ಯಾಬ್ ಮುಂದುವರೆಸಿಕೊಂಡು ಹೋಗುತ್ತಿದ್ದ. ಒಂದು ವಾರದ ಹಿಂದೆ ನೋಟಿಸ್ ನೀಡಿದ್ದೆವು. ಆದಕ್ಕೆ ಉತ್ತರ ನೀಡಿರಲಿಲ್ಲ. ಆದ್ದರಿಂದ ಶುಕ್ರವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿದೆವು’ ಎಂದು ಹೇಳಿದರು. ಟ್ರೇಡ್ ಲೈಸೆನ್ಸ್, ಜಿಲ್ಲಾ ಆರೋಗ್ಯಾಧಿಕಾರಿ ಅನುಮತಿ ಇಲ್ಲ.

ADVERTISEMENT

ದಾಳಿ ವೇಳೆಯ ಎಂಜಿನಿಯರ್‌ ಚಿನ್ಮಯಿ, ಆರೋಗ್ಯ ನಿರೀಕ್ಷಕ ಶಶಿಧರ್, ಆಂಜಿನಪ್ಪ, ಡಾ.ದಾ.ರ. ಶಿವಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.