ADVERTISEMENT

ಮಲೇಬೆನ್ನೂರು ಪಟ್ಟಣದಲ್ಲಿ ಬಿರುಸು ಮಳೆ

ಕೃಷಿಕರಿಗೆ ನೆಮ್ಮದಿ ತಂದ ಮುಂಗಾರು ಪೂರ್ವ ವರ್ಷಧಾರೆ

​ಪ್ರಜಾವಾಣಿ ವಾರ್ತೆ
Published 18 ಮೇ 2024, 15:07 IST
Last Updated 18 ಮೇ 2024, 15:07 IST
ಮಲೇಬೆನ್ನೂರು ಪಟ್ಟಣದಲ್ಲಿ ಶನಿವಾರ ಸಂಜೆ ಬಿರುಸಾದ ಮಳೆ ಸುರಿಯಿತು
ಮಲೇಬೆನ್ನೂರು ಪಟ್ಟಣದಲ್ಲಿ ಶನಿವಾರ ಸಂಜೆ ಬಿರುಸಾದ ಮಳೆ ಸುರಿಯಿತು   

ಮಲೇಬೆನ್ನೂರು: ಹೋಬಳಿಯ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ಬಿರುಸಾದ ಮಳೆ ಸುರಿದಿದ್ದು, ತೋಟದ ಬೆಳೆಗಾರರಿಗೆ ನೆಮ್ಮದಿ ತಂದಿದೆ.

ಕಳೆದ 2–3 ದಿನಗಳಿಂದ ಈ ಭಾಗದಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ಶನಿವಾರ ರಭಸವಾಗಿ ಸುರಿಯಿತು. ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು ಸಿಡಿಲು ಮಿಂಚಿನ ಆರ್ಭಟದೊಂದಿಗೆ ಮಳೆ ಸುರಿಯಿತು. 

ಮಳೆಯಿಂದಾಗಿ ಮೋರಿಗಳು ಸ್ವಚ್ಛವಾಗಿದ್ದು, ವಾತಾವರಣ ತಂಪಾಗಿ ಹಿತಾನುಭವ ನೀಡುತ್ತಿದೆ. ಕೃಷಿ ಚಟುವಟಿಕೆ ಆರಂಭಕ್ಕೆ ನಾಂದಿ ಹಾಡಿದೆ.

ADVERTISEMENT

ಮಳೆಯ ಕಾರಣ ವಿದ್ಯುತ್‌ ಪೂರೈಕೆ ಸ್ಥಗಿತವಾಗಿತ್ತು. ಆಸ್ತಿ ಪಾಸ್ತಿ ಹಾನಿ ಕುರಿತು ಮಾಹಿತಿ ಲಭ್ಯವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.