ADVERTISEMENT

ಪಂಚಲೋಹ ವಿಗ್ರಹ ಕಳವು ಮಾಡಿದ ಅಪರಾಧಿಗೆ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 16:29 IST
Last Updated 6 ಏಪ್ರಿಲ್ 2021, 16:29 IST

ದಾವಣಗೆರೆ: ಪಂಚಲೋಹದ ಮೂರ್ತಿ ಹಾಗೂ ಪಾದುಕೆಗಳನ್ನು ಕಳ್ಳತನ ಮಾಡಿ, ಮಹಿಳೆಯ ಕುತ್ತಿಗೆಯಿಂದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದ ಅಪರಾಧಿಗೆ ಇಲ್ಲಿನಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಇಲ್ಲಿನ ಅಶೋಕನಗರದ ನಿವಾಸಿ ಬಸವರಾಜ್ ಶಿಕ್ಷೆಗೆ ಗುರಿಯಾದ ಆರೋಪಿ.ನಗರದ ದೇವರಾಜ್ ಅರಸ್ ಬಡಾವಣೆ 'ಸಿ' ಬ್ಲಾಕ್‌, 5ನೇ ಕ್ರಾಸ್‌ನ ಮನೆಯಲ್ಲಿ ನೀಲಮ್ಮ ಒಬ್ಬರೇ ವಾಸವಾಗಿದ್ದರು. 2014ರ ಮಾರ್ಚ್ 24ರಂದು ಬಸವರಾಜ್ ಮನೆಗೆ ನುಗ್ಗಿ ದೇವರ ಮನೆಯಲ್ಲಿದ್ದ ಪಂಚಲೋಹದ ಲಕ್ಷ್ಮೀದೇವಿಯ ಮೂರ್ತಿ ಹಾಗೂ 2 ಪಾದುಕೆಗಳನ್ನು ಕಳ್ಳತನ ಮಾಡಿದ.

ಬಳಿಕ ಅಲ್ಲಿದ್ದ ನೀಲಮ್ಮ ಅವರಿಗೆ ಚಾಕುವಿನಿಂದ ತಿವಿದು ಅವರ ಕೊರಳಲ್ಲಿದ್ದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡ. ಆ ವೇಳೆ ಮನೆಯಿಂದ ಹೊರಗೆ ಓಡಿಹೋಗುತ್ತಿದ್ದಾಗ ಸಾರ್ವಜನಿಕರು ಬಸವರಾಜ್‌ನನ್ನು ಹಿಡಿದು ಬಸವನಗರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸ್ ಸಿಬ್ಬಂದಿ ಮಾಲು ಸಮೇತ ಹಿಡಿದು ಪ್ರಕರಣ ದಾಖಲಿಸಿ ಆರೋಪಿಯ ವಿರುದ್ಧ ನಗರದ ಸಿಪಿಐ ಅವರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ADVERTISEMENT

ಮಂಗಳವಾರ ವಿಚಾರಣೆ ನಡೆದು ನ್ಯಾಯಾಧೀಶರಾದ ಗೀತಾ ಕೆ.ಬಿ. ಅವರು ಆರೋಪಿ ಬಸವರಾಜನಿಗೆ 7 ವರ್ಷಗಳ ಜೈಲು ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದರು. ಸರ್ಕಾರದ ಪರವಾಗಿ ಅಭಿಯೋಜಕ ಎಸ್.ವಿ. ಪಾಟೀಲ್ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.