
ದಾವಣಗೆರೆ: ಗಣಿತವು ವಿಜ್ಞಾನ ಮತ್ತು ವಿಜ್ಞಾನೇತರ ವಿಷಯಗಳಿಗೆ ತಾಯಿ ಬೇರಿದ್ದಂತೆ. ಎಂಜಿನಿಯರಿಂಗ್ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಗಣಿತ ಅತಿ ಅವಶ್ಯಕ ಎಂದು ಜಿ.ಎಂ. ವಿಶ್ವವಿದ್ಯಾಲಯದ ಕುಲಸಚಿವ ಸುನೀಲ್ ಕುಮಾರ್ ಬಿ.ಎಸ್ ಅಭಿಪ್ರಾಯಪಟ್ಟರು.
ಜಿ.ಎಂ. ವಿಶ್ವವಿದ್ಯಾಲಯದ ಮೂಲ ಮತ್ತು ಅನ್ವಯಿಕ ವಿಜ್ಞಾನ ವಿಭಾಗ, ಗಣಿತ ಮತ್ತು ಭೌತಿಕ ವಿಜ್ಞಾನ ಶಾಲೆ ವತಿಯಿಂದ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರ 138 ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ಸೋಮವಾರ ಏರ್ಪಡಿಸಿದ್ದ ‘ಮ್ಯಾಥ್ವಿಜ್ - 2025’ ಕ್ವಿಜ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಗಣಿತದ ಬಗ್ಗೆ ಭಯ ಪಡದೆ, ಮೂಲಭೂತ ವಿಷಯಗಳನ್ನು ಕಲಿಯಲು ಆಸಕ್ತಿ ತೋರಬೇಕು. ಸಂಕೋಚ ಬಿಟ್ಟು ವಿಷಯ ಅರಿತುಕೊಳ್ಳಿ. ಪ್ರಾಧ್ಯಾಪಕರನ್ನು ಪ್ರಶ್ನಿಸಿ ತಿಳಿದುಕೊಳ್ಳುವುದರಿಂದ ವಿಷಯದ ಮೇಲೆ ಹಿಡಿತ ಸಾಧಿಸಬಹುದು’ ಎಂದು ಸಲಹೆ ನೀಡಿದರು.
ಗಣಿತ ಮತ್ತು ಭೌತಿಕ ವಿಜ್ಞಾನ ಶಾಲೆಯ ನಿರ್ದೇಶಕ ಓಂಕಾರಪ್ಪ ಕೆ.ಎಸ್, ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಬಿ.ಎಂ. ಸಂತೋಷ್, ಪ್ರಸನ್ನ ಬಿ.ಎಂ.ಆರ್, ಸಹಾಯಕ ಪ್ರಾಧ್ಯಾಪಕ ಮಧುಕೇಶ್ ಜೆ.ಕೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.