ADVERTISEMENT

ಡಿಜಿಟಲ್ ಕ್ಷೇತ್ರದ ಸಾಧನೆ: ಮಾಯ ಜಯಪ್ಪಗೆ ಬೆಳ್ಳಿ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 5:06 IST
Last Updated 25 ಸೆಪ್ಟೆಂಬರ್ 2025, 5:06 IST
   

ಸಂತೇಬೆನ್ನೂರು: ಸಮೀಪದ ತಣಿಗೆರೆ ಗ್ರಾಮದ ಮಾಯಾ ಜಯಪ್ಪ ಅವರಿಗೆ ಜಾಗತಿಕ ಮಟ್ಟದಲ್ಲಿ ಡಿಜಿಟಲ್ ಕ್ಷೇತ್ರ ಮಹಿಳಾ ಸಾಧಕರನ್ನು ಗುರಿತಿಸುವ ಇನ್‌ಫಾರ್ಮೇಷನ್ ಸರ್ವೀಸಸ್ ಗ್ರೂಪ್ ವತಿಯಿಂದ ಸಿಲ್ವರ್ ರೈಸಿಂಗ್ ಪುರಸ್ಕಾರ ದೊರೆತಿದೆ.

ಬೆಂಗಳೂರಿನ ರಿಸಲ್ಟ್ಸ್ ಸಿಎಕ್ಸ್ ಸಂಸ್ಥೆಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಮಾಯಾ ಜಯಪ್ಪ ರೋಬೋಟಿಕ್ ಪ್ರೊಸೆಸ್ ಆಟೊಮೇಷನ್ ತಂತ್ರಜ್ಞಾನದಲ್ಲಿ ವಿಶೇಷ ಸಾಧನೆ ತೋರಿದ್ದಾರೆ. ಇವರಿಂದ ನಿರ್ಮಿಸಲಾದ ಆಟೊಮೇಷನ್ ರೋಬೋಟ್‌ಗಳು ಐಟಿ ಕ್ಷೇತ್ರದಲ್ಲಿ ಸಮಯ ಉಳಿತಾಯ, ದೋಷ ಕಡಿತ ಹಾಗೂ ದಕ್ಷತೆ ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ.

‘ಐಎಸ್‌ಜಿ ನೀಡುವ ಈ ಪ್ರಶಸ್ತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಗೌರವಾನ್ವಿತ ಪ್ರಶಸ್ತಿಗಳಲ್ಲಿ ಸೇರಿದೆ. ಡಿಜಿಟಲ್ ಜಗತ್ತಿನ ಸಾಧಕಿಯರನ್ನು ಗುರುತಿಸುವುದು ಪ್ರಶಸ್ತಿ ಉದ್ದೇಶ. ಐಎಸ್‌ಜಿ ಪ್ರಶಸ್ತಿ ನನ್ನ ಪಥದ ನೈಜ ಮೌಲ್ಯವನ್ನು ಅನಾವರಣಗೊಳಿಸಿದೆ. ಇನ್ನೂ ಉತ್ತುಂಗದ ಸಾಧನೆಗೆ ಉತ್ಸುಕಳಾಗಿದ್ದೇನೆ’ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.