ಮಾಯಕೊಂಡ: ಗ್ರಾಮದ ಮುಖ್ಯ ರಸ್ತೆಯಲ್ಲಿನ ಗುಂಡಿ ಅಗೆದು ಮೂರು ತಿಂಗಳು ಕಳೆದಿದ್ದರೂ ಅದನ್ನ ಮುಚ್ಚದೆ ರಸ್ತೆಯನ್ನೆ ಬಂದ್ ಮಾಡಿದ್ದಾರೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಪಂಚಾಯಿತಿ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ರೈತ ಮುಖಂಡ ರಾಮಜೋಗಿ ಪ್ರತಾಪ್ ಆರೋಪಿಸಿದ್ದಾರೆ.
ದ್ವಿಪತ ರಸ್ತೆ ನಿರ್ಮಾಣಕ್ಕೂ ಮೊದಲು ಆ ಜಾಗದಲ್ಲಿ ಒಂದು ಕೊಳವೆ ಬಾವಿ ಇತ್ತು. ರಸ್ತೆ ವಿಸ್ತರಣೆ ಆದ್ದರಿಂದ ಅದರಲ್ಲಿನ ಪೈಪುಗಳನ್ನ ಪಂಚಾಯಿತಿಯವರು ತೆರವುಗೊಳಿಸಿದ್ದರು. ಆದರೆ, ಕೊಳವೆ ಬಾವಿಯನ್ನ ಸರಿಯಾಗಿ ಮುಚ್ಚದೆ ಒಂದು ಕಲ್ಲು ಇಟ್ಟಿದ್ದಾರೆ. ರಸ್ತೆ ಅಗೆದು ಎರಡ್ಮೂರು ತಿಂಗಳಾಗಿದ್ದರೂ ಅದನ್ನ ಮುಚ್ಚುವ ಕೆಲಸಕ್ಕೆ ಪಂಚಾಯಿತಿಯವರು ಮುಂದೆ ಬಂದಿಲ್ಲ. ಪಿಡಿಒ ಶೀಘ್ರವೇ ರಸ್ತೆಯಲ್ಲಿನ ಕೊಳವೆ ಬಾವಿಯನ್ನು ಮುಚ್ಚಿ ರಸ್ತೆಯನ್ನ ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ದಸರಾ ಹಬ್ಬ ಇದ್ದುದರಿಂದ ಗುಂಡಿ ಮುಚ್ಚುವ ಕೆಲಸ ತಡವಾಗಿದೆ ಇನ್ನೆರಡು ದಿನಗಳಲ್ಲಿ ಪೂರ್ಣ ಕೆಲಸ ಮುಗಿಸಿ, ರಸ್ತೆ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎನ್ನುತ್ತಾರೆ ಪಿಡಿಒ ಎನ್. ಶ್ರೀನಿವಾಸ್.
ಈ ವೇಳೆ ಗುಡ್ಲೇರ್ ತಿಪ್ಪೇಶ್, ಚಾಟಿ ರೇವಣ್ಣ, ಮಾದಪ್ಳ ಆನಂದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.