ಮಲೇಬೆನ್ನೂರು: ಸಮೀಪದ ಭಾಸ್ಕರ್ ರಾವ್ ಕ್ಯಾಂಪಿನಲ್ಲಿ ರಾಮಬಾಬು ಎಂಬುವರ ತೋಟದಲ್ಲಿ ಫಲಕ್ಕೆ ಬಂದಿದ್ದ 25 ಅಡಿಕೆ ಮರಗಳನ್ನು ಸೋಮವಾರ ಕಿಡಿಗೇಡಿಗಳು ಕತ್ತರಿಸಿ ಹಾಕಿದ್ದಾರೆ.
ತೋಟದ ಮಾಲೀಕ ಮಂಗಳವಾರ ತೋಟಕ್ಕೆ ಹೋದ ವೇಳೆ ಕೃತ್ಯ ಗೊತ್ತಾಗಿದೆ. ಸುದ್ದಿ ತಿಳಿದ ಗ್ರಾಮಸ್ಥರು , ರೈತರು ಸ್ಥಳಕ್ಕೆ ಬಂದು ಬೇಸರ ಹಾಗೂ ಆತಂಕ ವ್ಯಕ್ತಪಡಿಸಿದರು.
ಈ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಮಾಲೀಕರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.