ADVERTISEMENT

ಕೋವಿಡ್‌ ಭೀತಿ: ಅಂಚೆ ಇಲಾಖೆಯಿಂದ ಅಗತ್ಯ ಸೇವೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 6:47 IST
Last Updated 5 ಏಪ್ರಿಲ್ 2020, 6:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ದೇಶದಾದ್ಯಂತ ಕೋವಿಡ್ ವೈರಸ್‍ನಿಂದ ರಾಷ್ಟ್ರೀಯ ವಿಪತ್ತು ಎದುರಾಗಿದ್ದು, ಈ ಸಂದರ್ಭದಲ್ಲಿ ಅಂಚೆ ಇಲಾಖೆಯು ನಾಗರಿಕರಿಗೆ ಅಗತ್ಯವಾದ ಸೇವೆಗಳನ್ನು ನೀಡಲು ಅಗತ್ಯ ಕ್ರಮ ಕೈಗೊಂಡಿದೆ.

ಸಾರ್ವಜನಿಕ ಸಂಪರ್ಕ ಮತ್ತು ಸಾಗಣೆ ಇಲ್ಲದಿರುವುದರಿಂದ ಔಷಧಗಳು ಮತ್ತು ಮೆಡಿಕಲ್ ಉಪಕರಣಗಳನ್ನು ಕಳುಹಿಸುವುದು ಸಾರ್ವಜನಿಕರಿಗೆ ಬಹಳ ಕಷ್ಟವಾಗಿದೆ. ಈ ನಿಟ್ಟಿನಲ್ಲಿ ಅಂಚೆ ಇಲಾಖೆಯು ಔಷಧಿಗಳು ಒಳಗೊಂಡ ಎಲ್ಲಾ ಪಾರ್ಸಲ್‍ಗಳನ್ನು ಆದ್ಯತೆಯ ಮೇರೆಗೆ ಸ್ವೀಕರಿಸಿ ವೇಗವಾಗಿ ಬಟವಾಡೆ ಮಾಡಲಿದೆ.

ಸಾರ್ವಜನಿಕರು ಪಾರ್ಸಲ್‍ ಅನ್ನು ಎಲ್ಲಾ ಅಂಚೆ ಕಚೇರಿಗಳಲ್ಲಿ ಬುಕ್ ಮಾಡಬಹುದು. ಅಂಚೆ ಇಲಾಖೆಯಿಂದ ಮೆಡಿಕಲ್ ಪಾರ್ಸಲ್‍ಗಳನ್ನು ತ್ವರಿತಗತಿಯಲ್ಲಿ ಬುಕಿಂಗ್ ಹಾಗೂ ಬಟವಾಡೆ ಮಾಡಲು ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅಂಚೆ ಇಲಾಖೆ ಪ್ರಕಟಣೆ ತಿಳಿಸಿದೆ.

ADVERTISEMENT

ಅಂಚೆ ಇಲಾಖೆ ಸೇವೆಗಳು

* ಸಾಮಾಜಿಕ ಭದ್ರತೆ ಹಾಗೂ ಪಿಂಚಣಿಯ ಪಾವತಿ, ಪತ್ರ ಸೇವೆ,

*ಪಾರ್ಸಲ್ ಅಗತ್ಯವಾದ ಮೆಡಿಕಲ್ ಸರಬರಾಜು ಹಾಗೂ ಆಹಾರ ವಸ್ತುಗಳ ಬುಕಿಂಗ್ ಹಾಗೂ ಬಟವಾಡೆ,

*ಮನೆಯ ಬಾಗಿಲಿಗೆ ಅಥವಾ ಅಂಚೆ ಕಚೇರಿಯಲ್ಲಿ ಯಾವುದು ಸಾಧ್ಯವೋ ಅ ರೀತಿಯಲ್ಲಿ ಬಟವಾಡೆ

*ಹಣಕಾಸು ಸೇವೆಗಳು- ಹಣ ತುಂಬುವುದು ಮತ್ತು ಹಿಂತೆಗೆಯುವುದು

*ಎಟಿಎಂ ಸೇವೆ, ಮೈಕ್ರೊ ಎಟಿಎಂ ಮುಖಾಂತರ ಗ್ರಾಮೀಣ ಭಾಗದಲ್ಲಿ ಬೇರೆ ಬ್ಯಾಂಕ್ ಖಾತೆಯಿಂದ ಹಣ ಪಡೆಯುವ ವ್ಯವಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.