ದಾವಣಗೆರೆ: ಮಾರಾಟ ಮಾಡಲು ನೀರಾವನ್ನು ಅಕ್ರಮವಾಗಿ ಸಂಗ್ರಹಿಸಿದ್ದ ವ್ಯಕ್ತಿಗೆ ಇಲ್ಲಿನ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ 2ನೇ ನ್ಯಾಯಾಲಯವು ಒಂದು ವರ್ಷ ಜೈಲು ಹಾಗೂ ₹ 10 ಸಾವಿರ ದಂಡ ವಿಧಿಸಿ ಈಚೆಗೆ ತೀರ್ಪು ನೀಡಿದೆ.
ದಾವಣಗೆರೆ ತಾಲ್ಲೂಕು ನೇರ್ಲಿಗೆ ಗ್ರಾಮದ ಪ್ರಕಾಶ್ (38) ಶಿಕ್ಷೆಗೆ ಗುರಿಯಾದ ಅಪರಾಧಿ.2015ರ ಜುಲೈ ತಿಂಗಳಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಪ್ರಕಾಶ್ 25 ಲೀಟರ್ ನೀರಾವನ್ನು ಸಂಗ್ರಹಿಸಿದ್ದ.ದಾವಣಗೆರೆ ವಲಯ–2ರ ಅಬಕಾರಿ ಎಸ್ಐ ಎಂ.ದೇವೇಂದ್ರನಾಯ್ಕ ಅವರು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದರು. ಎಸ್‌ಐ ಎಚ್.ಕೃಷ್ಣಮೂರ್ತಿ ಅವರು ಪ್ರಕರಣದ ಪೂರ್ಣ ತನಿಖೆ ನಡೆಸಿ ಕೋರ್ಟ್‌ಗೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣ ಕುರಿತು ಜನವರಿ 5ರಂದು ನ್ಯಾಯಾಧೀಶರಾದ ಕಿರಣ್.ಪಿ.ಎಂ.ಪಾಟೀಲ್ ಅವರು ಪ್ರಕಾಶ್‍ಗೆ ಶಿಕ್ಷೆ ವಿಧಿಸಿದರು. ಸರ್ಕಾರಿ ಸಹಾಯಕ ಅಭಿಯೋಜಕ ವಸಂತ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.