ADVERTISEMENT

ಹೊಸ ವರ್ಷದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 15:38 IST
Last Updated 31 ಡಿಸೆಂಬರ್ 2019, 15:38 IST
ದಾವಣಗೆರೆಯ ಆಹಾರ್‌ 2000ನಲ್ಲಿ ಡ್ಯಾನ್ಸಿಂಗ್‌ ಗರ್ಲ್‌ ಕೇಕ್‌ ಖರೀದಿಸುತ್ತಿರುವ ಕೇಕ್‌ ಪ್ರಿಯರುಚಿತ್ರಳಗಳು: ಸತೀಶ ಬಡಿಗೇರ್
ದಾವಣಗೆರೆಯ ಆಹಾರ್‌ 2000ನಲ್ಲಿ ಡ್ಯಾನ್ಸಿಂಗ್‌ ಗರ್ಲ್‌ ಕೇಕ್‌ ಖರೀದಿಸುತ್ತಿರುವ ಕೇಕ್‌ ಪ್ರಿಯರುಚಿತ್ರಳಗಳು: ಸತೀಶ ಬಡಿಗೇರ್   

ದಾವಣಗೆರೆ: ಹೊಸ ವರ್ಷದ ಸಂಭ್ರಮಕ್ಕೆ ವಿವಿಧ ಬೇಕರಿಗಳಲ್ಲಿ ವಿವಿಧ ವಿನ್ಯಾಸಗಳ ಕೇಕ್‌ಗಳು ಭರದಿಂದ ಮಾರಾಟವಾಗಿವೆ.

ಆಹಾರ್‌ 2000ನಲ್ಲಿ ಕೇಕ್‌ ಪ್ರದರ್ಶನಕ್ಕೆ ಇಡಲಾಗಿದ್ದು, ನೋಡಲು ಭಾರಿ ಸಂಖ್ಯೆಯಲ್ಲಿ ಜನ ಬಂದಿದ್ದರು. ಶ್ರೀಮನ್ನಾರಾಯಣ ಚಿತ್ರದ ಪೋಸ್ಟರ್‌, ಯಶ್‌, ರಾಜಕುಮಾರ್‌, ಅಂಬಿ, ವಿಷ್ಣುವರ್ಧನ್‌, ದರ್ಶನ್‌, ಸುದೀಪ್‌, ಯೋಧರು ಕೇಕಲ್ಲಿ ಮೂಡಿದ್ದರು. ಚಾಕಲೇಟ್‌, ವೆನಿಲ್ಲಾ, ಪಿಸ್ತಾ ಕೇಕ್‌ಗಳಿಗೆ ಎಲ್ಲಿಲ್ಲದ ಬೇಡಿಕೆಗಳಿದ್ದವು.

ಚಿಟ್ಟೆ, ಕಲ್ಲಂಗಡಿ, ಕ್ರಿಕೆಟ್‌, ಹಲಸು, ಮಿಕ್ಕಿ ಮೌಸ್‌, ಟೈಟಾನಿಕ್‌ ಹಡಗು, ಹೂವಿನ ಬೊಕೆ, ಮಾವು, ಆಮೆ, ಡ್ಯಾನ್ಸಿಂಗ್‌ ಗರ್ಲ್‌, ಮೊಲ ಹೀಗೆ ನಾನಾ ತರಹದ ವಿನ್ಯಾಸಗಳು ಗಮನ ಸೆಳೆದವು.

ADVERTISEMENT

ಸೋಮವಾರ ಪ್ರದರ್ಶನ ಮತ್ತು ಮಾರಾಟ ಆರಂಭಗೊಂಡಿದ್ದು, ಭಾರಿ ಸಂಖ್ಯೆಯಲ್ಲಿ ಜನರ ಬರುತ್ತಿದ್ದಾರೆ. ಜ.1ರ ಸಂಜೆವರೆಗೆ ಇರಲಿದೆ ಎಂದು ಆಹಾರ್‌ 2000 ವ್ಯವಸ್ಥಾಪಕ ನಿರ್ದೇಶಕ ಜಿ.ವಿ. ರಮೇಶ್‌ ‘ಪ್ರಜಾವಾಣಿಗೆ ತಿಳಿಸಿದರು.

ಮೈಡೇ ಕೇಕ್‌, ಕಾವೇರಿ ಸಹಿತ ನಗರದಲ್ಲಿರುವ ಬಹುತೇಕ ಕಡೆಗಳಲ್ಲಿ ಕೇಕ್‌ಗಳ ಮಾರಾಟ ಭರ್ಜರಿಯಾಗಿ ನಡೆಯಿತು.

ಜಿಲ್ಲಾಧಿಕಾರಿ ಎಚ್ಚರಿಕೆ

ಹೊಸ ವರ್ಷವನ್ನು ಸಂತೋಷದಿಂದ ಆಚರಿಸಿ. ಆದರೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಬೇಡಿ. ವೈಯಕ್ತಿಕ ಜೀವನವನ್ನು ಹಾಳುಮಾಡಿಕೊಳ್ಳಬೇಡಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಪೇಜಾವರ ಸ್ವಾಮೀಜಿ ನಿಧನದ ಶೋಕಾಚರಣೆ ಇರುವುದರಿಂದ ಸರ್ಕಾರಿ ಇಲಾಖೆಗಳ ಭಾಗಿತ್ವ ಇರುವ ಯಾವುದೇ ಸಂಸ್ಥೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯನ್ನು ನಡೆಸಲಾಗುವುದಿಲ್ಲ. ಆಫೀಸರ್ಸ್‌ ಕ್ಲಬ್‌ ಸಹಿತ ಎಲ್ಲ ಕಡೆ ನಾಳೆ ಹೊಸ ವರ್ಷದ ಸಂಭ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.