ADVERTISEMENT

ಕೆರೆ ಸ್ವಚ್ಛಗೊಳಿಸಿದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 2:19 IST
Last Updated 1 ಜುಲೈ 2022, 2:19 IST
ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿ ಗ್ರಾಮದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಹೆಳವನಕಟ್ಟೆ ಲಕ್ಷ್ಮೀರಂಗನಾಥ ದೇವಾಲಯದ ಕೆರೆ ಸುತ್ತಮುತ್ತ ಬೆಳೆದಿದ್ದ ಜಾಲಿ ಲಂಟನ್ ಗಿಡಗಳನ್ನು ಗ್ರಾಮಸ್ಥರು ಗುರುವಾರ ಸ್ವಚ್ಛಗೊಳಿಸಿದರು.
ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿ ಗ್ರಾಮದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಹೆಳವನಕಟ್ಟೆ ಲಕ್ಷ್ಮೀರಂಗನಾಥ ದೇವಾಲಯದ ಕೆರೆ ಸುತ್ತಮುತ್ತ ಬೆಳೆದಿದ್ದ ಜಾಲಿ ಲಂಟನ್ ಗಿಡಗಳನ್ನು ಗ್ರಾಮಸ್ಥರು ಗುರುವಾರ ಸ್ವಚ್ಛಗೊಳಿಸಿದರು.   

ಮಲೇಬೆನ್ನೂರು: ಸಮೀಪದ ಕೊಮಾರನಹಳ್ಳಿ ಗ್ರಾಮದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಹೆಳವನಕಟ್ಟೆ ಲಕ್ಷ್ಮೀ ರಂಗನಾಥ ದೇವಾಲಯದ ಕೆರೆ ಸುತ್ತಮುತ್ತ ಬೆಳೆದಿದ್ದ ಜಾಲಿ ಲಂಟನ್ ಗಿಡಗಳನ್ನು ಗ್ರಾಮಸ್ಥರುಗುರುವಾರ ಕಡಿದು ಸ್ವಚ್ಛಗೊಳಿಸಿದರು.

ಪ್ರಸಕ್ತವರ್ಷದ ಮಳೆಗಾಲ ಮುಂಚಿತವಾಗಿ ಆರಂಭವಾದ್ದರಿಂದ ಜಂಗಲ್ ಬೆಳೆದಿದೆ. ಪೊದೆಗಳಲ್ಲಿ ಹಾವು, ಹುಳು–ಹುಪ್ಪಟೆ ಸೇರಿಕೊಳ್ಳುತ್ತವೆ. ಹಸು, ಕರು, ಕುರಿಗಳು ಮೇವು ತಿನ್ನಲು ಬಂದು ಕೆರಯಲ್ಲಿ ಬೀಳುವ ಅಪಾಯವಿದೆ. ಇಲ್ಲಿ ಸಂಚರಿಸುವವರಿಗೂ ತೊಂದರೆಯಾಗುತ್ತಿದ್ದರಿಂದ ಸ್ವಚ್ಛಗೊಳಿಸಲಾಯಿತು ಎಂದು ಐರಣಿ ಮಹೇಶ್ ತಿಳಿಸಿದರು.

ನಾಗರ ಪಂಚಮಿ ಅಂಗವಾಗಿ ಬರುವ ತಿಂಗಳು ಕೆರೆಜಾತ್ರೆ ಇದೆ. ಕೆರೆಯು ಮಳೆ ನೀರಿನಿಂದ ಭರ್ತಿಯಾಗಿ ಕಂಗೊಳಿಸುತ್ತಿದೆ. ಸರ್ಕಾರದ ಅನುದಾನಕ್ಕೆ ಕಾಯದೆ ಗ್ರಾಮಸ್ಥರೇ ಸ್ವಯಂ ಪ್ರೇರಣೆಯಿಂದ ಕೆರೆ ಸ್ವಚ್ಛತಾ ಕೆಲಸ ಆರಂಭಿಸಿದ್ದೇವೆ ಎಂದು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.