ADVERTISEMENT

ತಹಶೀಲ್ದಾರ್ ಜತೆ ಅನುಚಿತ ವರ್ತನೆ: ಸಹಶಿಕ್ಷಕ ಅಮಾನತು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 7:44 IST
Last Updated 17 ಏಪ್ರಿಲ್ 2024, 7:44 IST

ಚನ್ನಗಿರಿ (ದಾವಣಗೆರೆ ಜಿಲ್ಲೆ): ಇಲ್ಲಿನ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚುನಾವಣೆ ತರಬೇತಿ ಪಡೆಯುತ್ತಿದ್ದ ಪಟ್ಟಣದ ಮಿಲ್ಲತ್ ಪ್ರೌಢಶಾಲೆಯ ಸಹಶಿಕ್ಷಕರೊಬ್ಬರನ್ನು ಅಮಾನತುಗೊಳಿಸಿ ದಾವಣಗೆರೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. 

ಏಪ್ರಿಲ್‌ 8ರಂದು ಕಾಲೇಜಿನಲ್ಲಿ ಪಿಆರ್‌ಒ ಹಾಗೂ ಎಪಿಆರ್‌ಒಗಳಿಗೆ ಚುನಾವಣಾ ತರಬೇತಿ ಹಮ್ಮಿಕೊಳ್ಳಲಾಗಿತ್ತು. ಮಿಲ್ಲತ್ ಪ್ರೌಢಶಾಲೆಯ ಸಹ ಶಿಕ್ಷಕ ಸೈಯದ್ ಸುಲ್ತಾನ್ ಅಹಮ್ಮದ್ ಬೆಳಿಗ್ಗೆ ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನದ ತರಬೇತಿ ಅವಧಿಯಲ್ಲಿ ಮಹಿಳಾ ಸಿಬ್ಬಂದಿ ಜೊತೆ ಪೂರ್ವಾನುಮತಿ ಪಡೆಯದೇ ಕೊಠಡಿಯಿಂದ ಹೊರಗೆ ಹೋಗುತ್ತಿದ್ದರು.

‘ತರಬೇತಿ ವೇಳೆ ಹೊರಗೇಕೆ ಹೊರಟಿರುವಿರಿ’ ಎಂದು ಪ್ರಶ್ನಿಸಿದ್ದೆ. ಆಗ ಸಹಶಿಕ್ಷಕ, ಮಹಿಳಾ ಸಿಬ್ಬಂದಿ ಸಮ್ಮುಖದಲ್ಲಿಯೇ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಕೊಠಡಿಯಿಂದ ಹೊರ ಹೋಗುವ ಮೂಲಕ ಉದ್ಧಟತನ ತೋರಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡಲಾಗಿತ್ತು’ ಎಂದು ತಹಶೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.