ADVERTISEMENT

'ಬೇಲ್ ಪಡೆದ ವ್ಯಕ್ತಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ  ಹಕ್ಕಿಲ್ಲ'

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 5:00 IST
Last Updated 24 ಜುಲೈ 2021, 5:00 IST
ಮಲೇಬೆನ್ನೂರು ಪಟ್ಟಣದ ನೂತನ ವೀರಭದ್ರೇಶ್ವರ ದೇವಾಲಯ ಸಮುಚ್ಛಯಕ್ಕೆ ಸಚಿವ ಕೆ.ಎಸ್. ಈಶ್ವರಪ್ಪ ಶುಕ್ರವಾರ ಭೇಟಿ ನೀಡಿದ್ದರು.
ಮಲೇಬೆನ್ನೂರು ಪಟ್ಟಣದ ನೂತನ ವೀರಭದ್ರೇಶ್ವರ ದೇವಾಲಯ ಸಮುಚ್ಛಯಕ್ಕೆ ಸಚಿವ ಕೆ.ಎಸ್. ಈಶ್ವರಪ್ಪ ಶುಕ್ರವಾರ ಭೇಟಿ ನೀಡಿದ್ದರು.   

ಮಲೇಬೆನ್ನೂರು: ಭ್ರಷ್ಟಾಚಾರ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಬೇಲ್ ಪಡೆದು ಬಂದ ವ್ಯಕ್ತಿಗೆ ಯಡಿಯೂರಪ್ಪ ಅವರನ್ನು ಟೀಕಿಸುವ ಹಕ್ಕಿಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಶುಕ್ರವಾರ ಹೇಳಿದರು.

ಪಟ್ಟಣದ ನೂತನ ವೀರಭದ್ರೇಶ್ವರ, ಗಣೇಶ ದೇವಾಲಯ ಸಮುಚ್ಛಯ ವೀಕ್ಷಿಸಿ ನಂತರ ಮಾತನಾಡಿದರು

ಭ್ರಷ್ಟಾಚಾರದ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರುಮಾತನಾಡುವ ನೈತಿಕತೆ ಉಳಿಸಿಕೊಂಡಿಲ್ಲ. ಬಿ.ಎಸ್. ಯಡಿಯೂರಪ್ಪ ಯಾವುದೇ ಭ್ರಷ್ಟಾಚಾರ ಎಸಗಿಲ್ಲ’ ಎಂದರು.

ADVERTISEMENT

ಬಲಭಾಗದಿಂದ ಬಿದ್ದ ಹೂ:

ಇದೇ ಸಂದರ್ಭ ದೇವಾಲಯದಲ್ಲಿ ಅರ್ಚಕರು ಮಂತ್ರಿಗಳ ಹೆಸರಿನಲ್ಲಿ ವಿಶೇಷ ಪೂಜೆ ಅರ್ಚನೆ ಮಾಡಿದರು. ವಿಶೇಷ ಎಂದರೆ ವೀರಭದ್ರ ದೇವರ ವಿಗ್ರಹದಿಂದ ಹೂವು ಬಲಭಾಗದಿಂದ ಬಿತ್ತು.

ಇದರ ಬಗ್ಗೆ ಈಶ್ವರಪ್ಪ ಅವರನ್ನು ಪ್ರಶ್ನಿಸಿದಾಗ ‘ಯಾವುದೇ ವಿಶೇಷ ಅರ್ಥ ಕಲ್ಪಿಸಬೇಡಿ. ಎಲ್ಲ ಒಳ್ಳೆಯದಾಗುತ್ತದೆ. ದೇವಾಲಯದ ಸಂಕೀರ್ಣ ಬಹಳ ಸುಂದರವಾಗಿ ನಿರ್ಮಿಸಿದ್ದು ಚೆನ್ನಾಗಿದೆ ಎಂದರು.

ರಾಜಕೀಯ ಜಂಜಾಟ ಮರೆತು ವೀರಭದ್ರ ದೇವರ ಗುಗ್ಗುಳ, ವೀರಗಾಸೆ ಕುಣಿತ ವೀಕ್ಷಣೆ ಮಾಡಿದರು.

ದೇವಾಲಯದ ಸಮಿತಿ ಟ್ರಸ್ಟ್ ಸದಸ್ಯ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ. ಚಿದಾನಂದಪ್ಪ, ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.