ADVERTISEMENT

ದಾವಣಗೆರೆ: ಬಾರದ ಪರಿಹಾರ, 4 ಬಸ್‌ಗಳ ಜಪ್ತಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2022, 4:42 IST
Last Updated 21 ಜೂನ್ 2022, 4:42 IST
ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದವರಿಗೆ ಬರಬೇಕಿದ್ದ ಪರಿಹಾರದ ಬಾಕಿ ಮೊತ್ತವನ್ನು ಪಾವತಿಸದ ಕಾರಣ ವಾಯುವ್ಯ ಕರ್ನಾಟಕ ಸಾರಿಗೆಯ ಹಾವೇರಿ ಘಟಕದ ಬಸ್‌ಗಳನ್ನು ದಾವಣಗೆರೆಯಲ್ಲಿ ಸೋಮವಾರ ವಶಕ್ಕೆ ಪಡೆಯಲಾಯಿತು. ಅಪಘಾತದಲ್ಲಿ ಮರಣ ಹೊಂದಿದ ಕುಟುಂಬದ ಸದಸ್ಯರಾ‌ದ ಗೌರಿ ಎಸ್. ಪಾಟೀಲ್, ಕಿರುವಾಡಿ ಸೋಮಶೇಖರ್ ಇದ್ದಾರೆ –ಪ್ರಜಾವಾಣಿ ಚಿತ್ರ

ದಾವಣಗೆರೆ: ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದವರಿಗೆ ಬರಬೇಕಿದ್ದ ಪರಿಹಾರದ ಬಾಕಿ ಮೊತ್ತವನ್ನು ಪಾವತಿಸದ ಕಾರಣ ವಾಯವ್ಯ ಕರ್ನಾಟಕ ಸಾರಿಗೆಯ ಹಾವೇರಿ ಡಿಪೋದ 4 ಬಸ್‌ಗಳನ್ನು ನ್ಯಾಯಾಲಯದ ಆದೇಶದಂತೆ ನಗರದಲ್ಲಿ ಸೋಮವಾರ ವಶಕ್ಕೆ ಪಡೆಯಲಾಯಿತು.

ತುಮಕೂರು ಸಮೀಪದ ಟೋಲ್‌ಗೇಟ್ ಬಳಿ 2013ರ ನವೆಂಬರ್ 6ರಂದು ಬಸ್ ಡಿಕ್ಕಿಯಾಗಿ ಸಾಫ್ಟ್‌ವೇರ್ ಎಂಜಿನಿಯರ್ ಸಂಜೀವ್ ಎಂ. ಪಾಟೀಲ್ ಮೃತಪಟ್ಟಿದ್ದರು. ಪ್ರಕರಣದ ಬಗ್ಗೆ ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದು ₹2.15 ಕೋಟಿ ಪರಿಹಾರ ನೀಡುವಂತೆ ಆದೇಶ ನೀಡಲಾಗಿತ್ತು. ಆ ಮೊತ್ತವು 2017ರ ಹೊತ್ತಿಗೆ ಬಡ್ಡಿ ಸೇರಿ ₹2.82 ಕೋಟಿ ಆಗಿತ್ತು. ಈವರೆಗೆ ₹1.72 ಕೋಟಿಗಳನ್ನು ಸಂಸ್ಥೆ ಪಾವತಿಸಿದೆ. ಬಡ್ಡಿ ಸೇರಿ ಬಾಕಿ ಮೊತ್ತವನ್ನು ಪಾವತಿಸಬೇಕಾಗಿದೆ.

ನ್ಯಾಯಾಲಯದ ಅಮೀನರಾದ ಮಂಜುನಾಥ್, ರಾಜಕುಮಾರ್, ಗುರುಮೂರ್ತಿ, ವಕೀಲ ಎ.ಎಂ. ಹೆಗಡೆ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.