ನ್ಯಾಮತಿ: ಅರಣ್ಯ ಇಲಾಖೆಯಿಂದ ಚಿರತೆ ಸೆರೆಗೆ ಬೋನು ಇಡಲಾಗಿದೆ ಎಂದು ವಲಯ ಅರಣ್ಯ ಅಧಿಕಾರಿ ಕೆ.ಆರ್.ಚೇತನ ಮಾಹಿತಿ ನೀಡಿದರು. ತಾಲ್ಲೂಕಿನ ಕಾಡಂಚಿನ ಗ್ರಾಮಸ್ಥರು ಯಾವುದೇ ಸಮಯದಲ್ಲಿ ಜಮೀನುಗಳಿಗೆ ಒಂಟಿಯಾಗಿ ಸಂಚರಿಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಈಚೆಗೆ ಶಿವಮೊಗ್ಗ ತಾಲ್ಲೂಕು ಬಿಕ್ಕೊನಹಳ್ಳಿ ಗ್ರಾಮದ ಬಳಿ ಮಹಿಳೆಯನ್ನು ಕೊಂದಿರುವ ಚಿರತೆ ಫಲವನಹಳ್ಳಿ ಗ್ರಾಮದ ಬಳಿ ಸಂಚರಿಸುತ್ತಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದರು. ವನ್ಯಪ್ರಾಣಿಗಳ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.
ಚಿರತೆ ಸೆರೆಗೆ ಉಪವಲಯ ಅರಣ್ಯಾಧಿಕಾರಿಗಳಾದ ಬರ್ಕತ್‌ಅಲಿ, ಶಿವಯೋಗಿ, ಕೃಷ್ಣಮೂರ್ತಿ, ಅಂಜಲಿ ಮತ್ತು ವನಪಾಲಕರು ಗಮನ ಹರಿಸಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.