ಹಳೇಜೋಗ (ನ್ಯಾಮತಿ): ಅಡಿಕೆ ತೋಟದಲ್ಲಿ ದನ ಮೇಯಿಸುವಾಗ ರೈತ ಹನುಮಂತಪ್ಪ (72) ಅವರು ಹಾವು ಕಚ್ಚಿ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.
ಎಂದಿನಂತೆ ಮನೆಯ ದನಗಳನ್ನು ಅಡಿಕೆ ತೋಟದಲ್ಲಿ ಮೇಯಿಸಲು ಹೋದಾಗ ಆಕಸ್ಮಿಕವಾಗಿ ಹಾವು ಕಚ್ಚಿ ನೆಲಕ್ಕೆ ಬಿದ್ದಿದ್ದರು. ತಕ್ಷಣ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಅವರು ಮೃತಪಟ್ಟರು ಎಂದು ಮೃತರ ಪುತ್ರ ನ್ಯಾಮತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸ್ ಇನ್‌ಸ್ಪೆಕ್ಟರ್ ಎನ್.ಎಸ್.ರವಿ ಸೂಚನೆಯಂತೆ ಹೆಡ್ ಕಾನ್‌ಸ್ಟೆಬಲ್ ಎಸ್.ಸುರೇಶ ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.