
ಪ್ರಜಾವಾಣಿ ವಾರ್ತೆ
ದಾವಣಗೆರೆ: ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಸತತ ಎರಡು ಬಾರಿ ಮುಂದೂಡಲ್ಪಟ್ಟಿತು. ಆದರೂ ಮುಂದೂಡಲ್ಪಟ್ಟ ಸಮಯಕ್ಕೆ ಸಭೆ ಆರಂಭವಾಗಲಿಲ್ಲ.
ಮಧ್ಯಾಹ್ನ 12ಗಂಟೆಗೆ ನಿಗದಿತ ಸಭೆಯನ್ನು 2.30ಕ್ಕೆ ಮುಂದೂಡಲಾಯಿತು. ಆದರೆ, ಮತ್ತೆ ಸಭೆಯನ್ನು 3.30ಕ್ಕೆ ನಿಗದಿಪಡಿಸಲಾಯಿತು. ಪೂರ್ವನಿಗದಿಯಾದ ಸಭೆಗೆ ಅಧಿಕಾರಿಗಳು ಕಡತಗಳನ್ನು ಹಿಡಿದುಕೊಂಡು ಹಾಜರಾಗಿದ್ದರು. ಇತ್ತ ಸಂಜೆ 4.15 ಆದರೂ ಸಭೆ ಆರಂಭವಾಗುವ ಯಾವ ಲಕ್ಷಣಗಳೂ ಕಾಣಲಿಲ್ಲ.
ಇದರಿಂದಾಗಿ ಜಿಲ್ಲಾ ಮಟ್ಟದ ಕಚೇರಿಗಳ ಕೆಲಸಗಳೂ ಸ್ಥಗಿತಗೊಂಡಿದ್ದವು.
ಜಿಲ್ಲಾ ಮಟ್ಟದ ಅಧಿಕಾರಿಗಳು ನಗೆ ಚಟಾಕಿಗಳನ್ನು ಹಾರಿಸುತ್ತಾ ಕಾಲ ಕಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.