ADVERTISEMENT

ಮೂರು ಕಂಟೈನ್‌ಮೆಂಟ್‌ ವಲಯಗಳಲ್ಲಿ ಜನ ನಿರಾಳ

ಕೆಟಿಜೆ ನಗರ, ಶಿವನಗರ, ಬೇತೂರು ರಸ್ತೆಯಲ್ಲಿ ಈಗ ಕೊರೊನಾ ಸೋಂಕಿಗೆ ಒಳಗಾದವರು ಇಲ್ಲ

ಬಾಲಕೃಷ್ಣ ಪಿ.ಎಚ್‌
Published 25 ಮೇ 2020, 9:11 IST
Last Updated 25 ಮೇ 2020, 9:11 IST
ಸೀಲ್‌ಡೌನ್‌ ಆಗಿರುವ ಕೆಟಿಜೆ ನಗರ
ಸೀಲ್‌ಡೌನ್‌ ಆಗಿರುವ ಕೆಟಿಜೆ ನಗರ   

ದಾವಣಗೆರೆ: ಕೊರೊನಾ ವೈರಸ್‌ ಸೋಂಕು ಪತ್ತೆಯಾದವರ ಮನೆ ಇರುವ ಕಾರಣಕ್ಕೆಕಂಟೈನ್‌ಮೆಂಟ್‌ ವಲಯಗಳಾಗಿದ್ದವುಗಳಲ್ಲಿ ಈಗಮೂರುಕಡೆಯ ಜನರು ನಿರಾಳರಾಗಿದ್ದಾರೆ. ಯಾಕೆಂದರೆ, ಈ ಮೂರೂ ಕಡೆ ಸೋಂಕು ಪತ್ತೆಯಾದವರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

ಕೆಟಿಜೆ ನಗರ, ಶಿವನಗರ, ಬೇತೂರು ರಸ್ತೆ ಈ ಮೂರೂಕಂಟೈನ್‌ಮೆಂಟ್‌ವಲಯಗಳಲ್ಲಿಈಗ ಸೋಂಕಿತರು ಇಲ್ಲ.ಮೂರುಕಡೆಯೂ ತಲಾ ಒಬ್ಬರು ಸೋಂಕಿತರು ಇದ್ದರು. ಈರುಳ್ಳಿ ಲಾರಿಯಲ್ಲಿ ಹೊರ ಜಿಲ್ಲೆಗೆ ಹೋಗಿ ಬಂದು, ನೇರವಾಗಿ ಆಸ್ಪತ್ರೆಗೆ ಹೋಗಿದ್ದ ವ್ಯಕ್ತಿ (ಪಿ.623) ಗುಣಮುಖರಾಗಿ ಮೇ 21ರಂದು ಬಿಡುಗಡೆಯಾಗಿದ್ದರು. ಜಾಲಿನಗರದ ವೃದ್ಧರ ಸಂಬಂಧಿಯಾಗಿದ್ದ ಕೆಟಿಜೆ ನಗರದ ನಿವಾಸಿ ಶಿಕ್ಷಕಿ (ಪಿ.665) ಮೇ 22ರಂದು ಬಿಡುಗಡೆಗೊಂಡಿದ್ದರು. ಅಜ್ಮೇರ್‌ಗೆ ಹೋಗಿದ್ದ ಸಂದರ್ಭದಲ್ಲಿ ಲಾಕ್‌ಡೌನ್‌ ಆಗಿ ಅಲ್ಲಿ ಸಿಕ್ಕಿಹಾಕಿಕೊಂಡು ಒಂದೂವರೆ ತಿಂಗಳ ಬಳಿಕ ಮರಳಿದ್ದ ತಂಡದಲ್ಲಿದ್ದ ಶಿವನಗರದ ಯುವಕನಿಗೆ (ಪಿ.847) ಕೋವಿಡ್‌ ಇರುವುದು ದೃಢಪಟ್ಟಿತ್ತು. ಭಾನುವಾರ ಈ ಯುವಕ ಬಿಡುಗಡೆಗೊಂಡಿದ್ದಾರೆ.

‘ಸೋಂಕು ಇದ್ದವರು ಗುಣಮುಖರಾಗಿ ಬಿಡುಗಡೆ ಆದ ಕೂಡಲೇ ಸೀಲ್‌ಡೌನ್‌ ತೆಗೆಯಲಾಗುವುದಿಲ್ಲ. ಆದರೆ ವ್ಯಾಪ್ತಿಯನ್ನು ಕಡಿಮೆ ಮಾಡಲಾಗುತ್ತದೆ. ಸೋಂಕು ಪತ್ತೆಯಾಗಿ ಮುಂದಿನ 28 ದಿನಗಳಲ್ಲಿ ಯಾವುದೇ ಪ್ರಕರಣ ಕಾಣಿಸದಿದ್ದರೆಕಂಟೈನ್‌ಮೆಂಟ್‌ ವಲಯ ಮುಕ್ತಗೊಳಿಸಲಾಗುತ್ತದೆ’ ಎಂದು ಕೆಟಿಜೆ ನಗರದ ಇನ್ಸಿಡೆಂಟ್‌ ಕಮಾಂಡರ್‌ ಆಗಿರುವ ಯುವಜನ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಶ್ರೀನಿವಾಸ್‌ ತಿಳಿಸಿದರು.

ADVERTISEMENT

‘ಬೇತೂರು ರಸ್ತೆಯ ಸೋಂಕು ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ವಾರಂಟೈನ್‌ನಲ್ಲಿ ಇದ್ದವರಲ್ಲಿ ಇನ್ನಿಬ್ಬರು ಬಿಡುಗಡೆಗೊಂಡರೆ ಅಲ್ಲಿಗೆ ಎಲ್ಲರೂ ಮನೆ ಸೇರಿದಂತಾಗುತ್ತದೆ. ಆದರೂ ಕಂಟೈನ್‌ಮೆಂಟ್‌ ಅವಧಿ ಮುಗಿಯುವರೆಗೆ ಅಲ್ಲಿ 60 ವರ್ಷ ದಾಟಿದವರ, ಜ್ವರ, ಶೀತ, ಗಂಟಲು ನೋವು ಇರುವವರ, ಗರ್ಭಿಣಿಯರ ಪರೀಕ್ಷೆ ಮಾಡಲಾಗುವುದು’ ಎಂದು ಬೇತೂರು ರಸ್ತೆಯ ಇನ್ಸಿಡೆಂಟ್‌ ಕಮಾಂಡರ್‌ ಆಗಿರುವ ಮಹಿಳಾ ಮತ್ತು ಮಕ್ಕಳಅಭಿವೃದ್ಧಿಇಲಾಖೆಯಉಪ ನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಶಿವನಗರದಲ್ಲಿ ಈಗ ಜನರಿಗೆ ನಿರಾಳಭಾವ ಬಂದಿದೆ. ಸದ್ಯಕ್ಕೆ ಯಾವುದೇ ಕೇಸ್‌ ಇಲ್ಲ. ಆದರೂ ಜನರ ಪರೀಕ್ಷೆ ಮುಂದುವರಿಸಿದ್ದೇವೆ’ ಎಂದು ಶಿವನಗರದ ಇನ್ಸಿಡೆಂಟ್‌ ಕಮಾಂಡರ್‌ ಆಗಿರುವ ಜಿಲ್ಲಾ ನೋಂದಣಾಧಿಕಾರಿ ಗಿರೀಶ್‌ ಎನ್‌.ಬಿ. ವಿವರಿಸಿದರು.

ಜಿಲ್ಲೆಯಲ್ಲಿ ಒಟ್ಟು 13ಕಂಟೈನ್‌ಮೆಂಟ್‌ ವಲಯಗಳಿದ್ದು, ಪೊಲೀಸ್‌ ಕ್ವಾಟ್ರರ್ಸ್‌, ವಿನಾಯಕ ನಗರ, ಎಸ್‌ಜೆಎಂ ನಗರಗಳಲ್ಲಿ ಒಂದೊಂದುಪ್ರಕರಣ, ಕೆರೆಬಿಳಚಿಯಲ್ಲಿ ಎರಡು ಪ್ರಕರಣಗಳಿವೆ. ಒಟ್ಟು ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜಾಲಿನಗರಕಂಟೈನ್‌
ಮೆಂಟ್‌ ಒಂದರಲ್ಲೇ ಪತ್ತೆಯಾಗಿವೆ. ಉಳಿದಂತೆ ಇಮಾಂನಗರ, ಬಾಷಾನಗರ ಆನಂತರದ ಸ್ಥಾನಗಳಲ್ಲಿವೆ. ಎಸ್‌ಪಿಎಸ್‌ ನಗರ, ರೈತರ ಬೀದಿ, ಆನೆಕೊಂಡದಲ್ಲಿ ಬೆರಳೆಣಿಕೆಯಷ್ಟು ಸೋಂಕಿತರ ಸಂಖ್ಯೆ ಇದ್ದರೂ ಈಚೆಗೆ ದೃಢಪಟ್ಟಿವೆ. ಆನೆಕೊಂಡದಲ್ಲಿ ಶುಕ್ರವಾರ ಸೋಂಕು ಪತ್ತೆಯಾದವರಲ್ಲಿ ಒಬ್ಬರ ಗೆಳೆಯ ಶಿವಕುಮಾರಸ್ವಾಮಿ ಬಡಾವಣೆ ನಿವಾಸಿ. ಅವರಲ್ಲೂ ಸೋಂಕು ಇರುವುದು ದೃಢಪಟ್ಟಿರುವುದರಿಂದ ಅದು ಹೊಸಕಂಟೈನ್‌ಮೆಂಟ್‌ ವಲಯವಾಗಿ ಘೋಷಣೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.