ADVERTISEMENT

ಬಂದ್‌ ಆಗದ ಪೆಟ್ರೋಲ್‌ ಬಂಕ್‌: ಸ್ಟಾಕ್‌ ಮುಗಿಯುವರೆಗೆ ತೈಲ ಲಭ್ಯ

​ಪ್ರಜಾವಾಣಿ ವಾರ್ತೆ
Published 31 ಮೇ 2022, 7:51 IST
Last Updated 31 ಮೇ 2022, 7:51 IST
ಕಮಿಷನ್ ಹೆಚ್ಚಳ, ತೈಲ ದರ ಇಳಿಕೆಯಿಂದ ಆಗಿರುವ ನಷ್ಟವನ್ನು ಮರುಪಾವತಿ ಮಾಡಿಕೊಡಲು ಆಗ್ರಹಿಸಿ ಪೆಟ್ರೋಲ್‌ ಬಂಕ್‌ ಮಾಲೀಕರು ಮಂಗಳವಾರ ಖರೀದಿ ಸ್ಥಗಿತಗೊಳಿಸಿದ್ದಾರೆ. ಆದರೆ ಬಂಕ್‌ನಲ್ಲಿ ತೈಲ ಸಂಗ್ರಹ ಮುಗಿಯುವವರೆಗೆ ಗ್ರಾಹಕರಿಗೆ ಡೀಸೆಲ್ ಪೆಟ್ರೋಲ್‌ ಒದಗಿಸಲಾಗುತ್ತಿದೆ.
ಕಮಿಷನ್ ಹೆಚ್ಚಳ, ತೈಲ ದರ ಇಳಿಕೆಯಿಂದ ಆಗಿರುವ ನಷ್ಟವನ್ನು ಮರುಪಾವತಿ ಮಾಡಿಕೊಡಲು ಆಗ್ರಹಿಸಿ ಪೆಟ್ರೋಲ್‌ ಬಂಕ್‌ ಮಾಲೀಕರು ಮಂಗಳವಾರ ಖರೀದಿ ಸ್ಥಗಿತಗೊಳಿಸಿದ್ದಾರೆ. ಆದರೆ ಬಂಕ್‌ನಲ್ಲಿ ತೈಲ ಸಂಗ್ರಹ ಮುಗಿಯುವವರೆಗೆ ಗ್ರಾಹಕರಿಗೆ ಡೀಸೆಲ್ ಪೆಟ್ರೋಲ್‌ ಒದಗಿಸಲಾಗುತ್ತಿದೆ.   

ದಾವಣಗೆರೆ: ಕಮಿಷನ್ ಹೆಚ್ಚಳ, ತೈಲ ದರ ಇಳಿಕೆಯಿಂದ ಆಗಿರುವ ನಷ್ಟವನ್ನು ಮರುಪಾವತಿ ಮಾಡಿಕೊಡಲು ಆಗ್ರಹಿಸಿ ಪೆಟ್ರೋಲ್‌ ಬಂಕ್‌ ಮಾಲೀಕರು ಮಂಗಳವಾರ ಖರೀದಿ ಸ್ಥಗಿತಗೊಳಿಸಿದ್ದಾರೆ. ಆದರೆ ಬಂಕ್‌ನಲ್ಲಿ ತೈಲ ಸಂಗ್ರಹ ಮುಗಿಯುವವರೆಗೆ ಗ್ರಾಹಕರಿಗೆ ಡೀಸೆಲ್ ಪೆಟ್ರೋಲ್‌ ಒದಗಿಸಲಾಗುತ್ತಿದೆ.

ಹಿಂದೂಸ್ಥಾನ್ ಪೆಟ್ರೋಲಿಯಂ(ಎಚ್‌.ಪಿ), ಇಂಡಿಯನ್ ಆಯಿಲ್ ಮತ್ತು ಬಿಪಿಸಿಎಲ್ ಕಂಪನಿಗಳಿಂದ ತೈಲ ಖರೀದಿಯನ್ನು ಒಂದು ದಿನದ ಮಟ್ಟಿಗೆ ನಿಲ್ಲಿಸಿದ್ದಾರೆ. ಬಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಬೆಳಿಗ್ಗೆ ಬಹುತೇಕ ಪೆಟ್ರೋಲ್‌ ಬಂಕ್‌ನಲ್ಲಿ ವಾಹನಗಳ ಸಾಲು ಇದ್ದವು. ನಿಧಾನಕ್ಕೆ ಕಡಿಮೆಯಾಗಿವೆ.

ಪೆಟ್ರೋಲ್‌ನ ಸಮಸ್ಯೆ ಅಷ್ಟಾಗಿ ಉಂಟಾಗಿಲ್ಲ. ಆದರೆ ಡೀಸೆಲ್‌ ಕೊರತೆ ಕೆಲವು ಬಂಕ್‌ಗಳಲ್ಲಿ ಉಂಟಾಗಿದೆ. ಹದಡಿ ರಸ್ತೆಯಲ್ಲಿರುವ ಬಂಕ್‌ಗಳಲ್ಲಿ ಡೀಸೆಲ್ ಲಭ್ಯವಿವೆ. 2000 ಲೀಟರ್‌ ಡೀಸೆಲ್‌ ಇನ್ನಿದೆ. ಮಧ್ಯಾಹ್ನ ವರೆಗೆ ಬರಬಹುದು. ಬಳಿಕ ಡೀಸೆಲ್‌ ಕೊರತೆಯಾಗಬಹುದು ಎಂದು ಹದಡಿ ರಸ್ತೆಯ ಮೋರ್‌ ಬಳಿಯ ಪೆಟ್ರೋಲ್ ಬಂಕ್‌ನ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.