ADVERTISEMENT

ಪ್ರಧಾನಿ ಮೋದಿ ಜನ್ಮದಿನ: ನಿರುದ್ಯೋಗಿ ದಿನವಾಗಿ ಯುವ ಕಾಂಗ್ರೆಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 2:56 IST
Last Updated 17 ಸೆಪ್ಟೆಂಬರ್ 2021, 2:56 IST
ಕೇಂದ್ರ ಬಿಜೆಪಿ ಸರ್ಕಾರದ ಯುವಜನ ವಿರೋಧಿ ನೀತಿಯನ್ನು ಖಂಡಿಸಿ ಜಗಳೂರಿನಲ್ಲಿ ಗುರುವಾರ ಸಾಮೂಹಿಕವಾಗಿ ಪತ್ರ ಚಳವಳಿ ನಡೆಸಲಾಯಿತು.
ಕೇಂದ್ರ ಬಿಜೆಪಿ ಸರ್ಕಾರದ ಯುವಜನ ವಿರೋಧಿ ನೀತಿಯನ್ನು ಖಂಡಿಸಿ ಜಗಳೂರಿನಲ್ಲಿ ಗುರುವಾರ ಸಾಮೂಹಿಕವಾಗಿ ಪತ್ರ ಚಳವಳಿ ನಡೆಸಲಾಯಿತು.   

ಜಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ಪ್ರತಿಭಟನಾರ್ಥವಾಗಿ ತಾಲ್ಲೂಕು ಯುವ ಕಾಂಗ್ರೆಸ್ ಸಮಿತಿಯು ಪಟ್ಟಣದಲ್ಲಿ ನಿರುದ್ಯೋಗಿ ದಿನವಾಗಿ ಗುರುವಾರ ಆಚರಿಸಿತು.

ಕೆಪಿಸಿಸಿ ಎಸ್‌ಟಿ ಘಟಕದ ಅಧ್ಯಕ್ಷ ಕೆ.ಪಿ. ಪಾಲಯ್ಯ ಮಾತನಾಡಿ, ‘ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಪ್ರತಿವರ್ಷ 2 ಕೋಟಿ ಉದ್ಯೋಗ ನಿಡುವುದಾಗಿ ಯುವಕರಿಗೆ ಭರವಸೆ ನೀಡಿದ್ದರು. ಆದರೆ, ಇಂದಿಗೂ ಭರವಸೆಯನ್ನು ಈಡೇರಿಸದೆ ಯುವಸಮೂಹವನ್ನು ವಂಚಿಸಿದ್ದಾರೆ. ಮೋದಿ ಅವರನ್ನು ಆರಾಧಿಸುವ ಯುವ ಸಮೂಹ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದರು.

ಕೇಂದ್ರ ಬಿಜೆಪಿ ಸರ್ಕಾರದ ಯುವಜನ ವಿರೋಧಿ ನೀತಿಯನ್ನು ಖಂಡಿಸಿ ಸಾಮೂಹಿಕವಾಗಿ ಪತ್ರ ಚಳವಳಿ ನಡೆಸಲಾಯಿತು.

ADVERTISEMENT

ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕೆಂಚೋಳ್, ಮುಖಂಡರಾದ ಸಿ. ತಿಪ್ಪೇಸ್ವಾಮಿ, ಬಿ. ಲೊಕೇಶ್, ರೇವಣ್ಣ, ರಮೇಶ್ ಗೊಲ್ಲರಹಟ್ಟಿ, ಬೊಮ್ಮಲಿಂಗಪ್ಪ, ಗೋಣೆಪ್ಪ, ಸುರೇಶ್ ನಾಯ್ಕ ಅವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.