ADVERTISEMENT

ದಾವಣಗೆರೆ: ಶಾಸಕ ಬಿ.ಪಿ. ಹರೀಶ್‌ ಮನೆಗೆ ಪೊಲೀಸರ ಭೇಟಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 6:13 IST
Last Updated 4 ಸೆಪ್ಟೆಂಬರ್ 2025, 6:13 IST
   

ದಾವಣಗೆರೆ: ಇಲ್ಲಿನ ವಿಶ್ವೇಶ್ವರಯ್ಯ ಉದ್ಯಾನದ ಬಳಿಯ ಶಾಸಕ ಬಿ.ಪಿ. ಹರೀಶ್‌ ಅವರ ಮನೆಗೆ ಪೊಲೀಸರು ಬುಧವಾರ ರಾತ್ರಿ ಭೇಟಿ ನೀಡಿ ವಿಚಾರಿಸಿದರು. ಈ ವೇಳೆ ಶಾಸಕರು ಮನೆಯಲ್ಲಿ ಇರಲಿಲ್ಲ.

ಮನೆಯಲ್ಲಿ ಶಾಸಕರ ಪತ್ನಿ ಹಾಗೂ ಪುತ್ರ ಇದ್ದರು. ‘ಶಾಸಕರು ಬೆಂಗಳೂರು ಪ್ರವಾಸದಲ್ಲಿದ್ದಾರೆ’ ಎಂಬ ಮಾಹಿತಿ ಪಡೆದ ಪೊಲೀಸರು, ವಿಚಾರಣೆಗೆ ಠಾಣೆಗೆ ಬರುವಂತೆ ತಿಳಿಸಿದ್ದಾರೆ.

ಮತ್ತೊಂದೆಡೆ ಶಾಸಕರ ಮನೆಯ ಸುತ್ತ ಕೆಲವರು ಅನುಮಾನಾಸ್ಪದ ರೀತಿಯಲ್ಲಿ ಸುಳಿದಾಡುತ್ತಿರುವುದನ್ನು ಗಮನಿಸಿದ ಬಡಾವಣೆ ಠಾಣೆಯ ಪೊಲೀಸರು ಭದ್ರತೆಯ ಅಗತ್ಯವಿದೆಯೇ ಎಂಬುದಾಗಿ ಪ್ರಶ್ನಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.