ಹೊನ್ನಾಳಿ: ಭೋವಿ ಸಮಾಜದ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕು ಭೋವಿ ಕ್ರಾಂತಿಕಾರಿ ಸಂಘರ್ಷ ಸಮಿತಿಯಿಂದ ಈಚೆಗೆ ಪ್ರತಿಭಟನೆ ನಡೆಸಲಾಯಿತು.
ಅಧ್ಯಕ್ಷರಾದ ಕೆ.ಬಿ. ರಾಜು ಬಸವನಹಳ್ಳಿ ಆಗ್ರಹಿಸಿದರು.
ಸೆ. 6ರಂದು ಶುಕ್ರವಾರ ಪ್ರತಿಭಟನೆಯ ನೇತೃತ್ವವಹಿಸಿದ್ದ ಕೆ.ಬಿ. ರಾಜು ಬಸವನಹಳ್ಳಿ ಮಾತನಾಡಿದರು.
‘ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಘಟನೆ ಮಾನವ ಕುಲಕ್ಕೆ ಕಳಂಕ. ನೊಂದ ಯುವತಿಗೆ ನ್ಯಾಯ ಒದಗಿಸಬೇಕು. ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರ ಯುವತಿಯ ಕುಟುಂಬದ ನೆರವಿಗೆ ಬರಬೇಕು’ ಎಂದು ಆಗ್ರಹಿಸಿದರು.
ಉಪತಹಶೀಲ್ದಾರ್ ಸುರೇಶ್ ಅವರಿಗೆ ಮನವಿ ಸಲ್ಲಿಸಿದರು. ಸಮಿತಿಯ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾವತಿ ಸಿಂಗಟಗೆರೆ, ಉಪಾಧ್ಯಕ್ಷ ದಿನೇಶ್ ಸವಳಂಗ, ಉಪಾಧ್ಯಕ್ಷೆ ಶೀಲಮ್ಮ ಗೋಪಗೊಂಡನಹಳ್ಳಿ, ಪ್ರಧಾನ ಕಾರ್ಯದರ್ಶಿ ಮೂರ್ತಿ, ಸಂಘಟನಾ ಕಾರ್ಯದರ್ಶಿ ವೀರೇಶ್ ಕುಂಕೋವ, ಸರೋಜಮ್ಮ, ಗ್ರಾಮ ಪಂಚಾಯಿತಿ ಸದಸ್ಯ ರತ್ನಮ್ಮ ಸವಳಂಗ, ಭಾಗ್ಯಮ್ಮ, ಸುಮಾ ಲಿಂಗಾಪುರ, ರಮೇಶ್ ಹನುಮಸಾಗರ ಸೇರಿ ನೂರಾರು ಮಹಿಳೆಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.